More

     ಪ್ರೇಕ್ಷಕರಿಲ್ಲದ ಐಪಿಎಲ್ ಅತಿಥಿಗಳಿಲ್ಲದ ಮದುವೆ ಮನೆ ಇದ್ದಂತೆ ಎಂದು ಇರ್ಫಾನ್ ಪಠಾಣ್ ಹೇಳಿದ್ದೇಕೆ..?

    ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಂಡ ಬಳಿಕವಂತೂ ಅಭಿಮಾನಿಗಳ ಬರವಿಲ್ಲ. ಬೇಸಿಗೆ ಅವಧಿಯಲ್ಲಿ ನಡೆಯುವ ಎರಡು ತಿಂಗಳ ಐಪಿಎಲ್ ಹಬ್ಬಕ್ಕಾಗಿ ಅಭಿಮಾನಿಗಳು ವರ್ಷವಿಡಿ ಕಾಯುತ್ತಾರೆ. ಕರೊನಾ ವೈರಸ್ ಭೀತಿಯಿಂದ ಈ ಬಾರಿಯ ಲೀಗ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಆದರೆ, ಐಪಿಎಲ್‌ನಲ್ಲಿ ಪ್ರೇಕ್ಷಕರು ಇಲ್ಲದಿದ್ದರೆ ಹೇಗೆ…ಒಂದು ವೇಳೆ ಐಪಿಎಲ್ ಪ್ರೇಕ್ಷಕರಿಲ್ಲದೆ ನಡೆದರೆ, ಮದುವೆ ಮನೆಯಲ್ಲಿ ಅತಿಥಿಗಳು ಇಲ್ಲದಂತೆ ಎಂದು ಮಾಜಿ ಆಟಗಾರ ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಅಮ್ಮನಾದ ಟೆನಿಸ್ ತಾರೆ ಸಿಬುಲ್ಕೋವಾ

     ಪ್ರೇಕ್ಷಕರಿಲ್ಲದ ಐಪಿಎಲ್ ಅತಿಥಿಗಳಿಲ್ಲದ ಮದುವೆ ಮನೆ ಇದ್ದಂತೆ ಎಂದು ಇರ್ಫಾನ್ ಪಠಾಣ್ ಹೇಳಿದ್ದೇಕೆ..?ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಕ್ರಿಕೆಟ್ ಆಡಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಬಯಕೆ. ಕೋವಿಡ್-19 ಮಹಾಮಾರಿಯಿಂದಾಗಿ ಈ ಬಾರಿ ಇದುವರೆಗೂ ಐಪಿಎಲ್ ಆಯೋಜಿಸಲು ಸಾಧ್ಯವಾಗಿಲ್ಲ. ಅಭಿಮಾನಿಗಳು ಮಾತ್ರ ಜಾತಕ ಪಕ್ಷಿಯಂತೆ ಐಪಿಎಲ್ ಆರಂಭವಾಗುವುದನ್ನೇ ಕಾಯುತ್ತಿದ್ದಾರೆ. ಒಂದು ವೇಳೆ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಆಯೋಜಿಸಿದರೆ ಅಭಿಮಾನಿಗಳು ನಿರಾಸೆ ಒಳಗಾಗುವುದು ಗ್ಯಾರಂಟಿ. ಅಭಿಮಾನಿಗಳ ಪರ ಬ್ಯಾಟ್ ಬೀಸಿರುವ ಇರ್ಫಾನ್ ಪಠಾಣ್, ಐಪಿಎಲ್ ಎಂದರೆ ಪ್ರೇಕ್ಷಕರು, ಪ್ರೇಕ್ಷಕರಿದ್ದರೆ ಐಪಿಎಲ್, ಆದರೆ, ಪ್ರೇಕ್ಷಕರಿಲ್ಲದ ಐಪಿಎಲ್ ಊಹಿಸಿಕೊಳ್ಳುವುದು ಕಷ್ಟ. ಒಂದು ವೇಳೆ ಮದುವೆಯನ್ನು ಅತಿಥಿಗಳಿಲ್ಲದ ನಡೆಸಬಹುದು, ಆದರೆ, ಐಪಿಎಲ್ ಸಾಧ್ಯವಾಗದು. ಐಪಿಎಲ್ ಪಂದ್ಯಗಳಿಗೆ ಭಾರತೀಯ ಸ್ಟೇಡಿಯಂಗಳು ಕಿಕ್ಕಿರುವ ತುಂಬಿರುತ್ತವೆ ಎಂದಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಬ್ಯಾಟಿಂಗ್​ ಶೈಲಿಗೆ ಫಿದಾ ಆಗಿದ್ದ ಸಚಿನ್..!

    ವೃತ್ತಿಜೀವನಕ್ಕೆ ನಿವೃತ್ತಿ ಹೇಳಿದ ಬಳಿಕ ಇರ್ಫಾನ್ ಪಠಾಣ್ ಜಮ್ಮುಕಾಶ್ಮೀರ ತಂಡಕ್ಕೆ ಮೆಂಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಐಪಿಎಲ್‌ನಲ್ಲಿ ಸಿಎಸ್‌ಕೆ, ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಆಡಿದ್ದರು. 29 ಟೆಸ್ಟ್, 120 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಿದ್ದಾರೆ.

    ಗೋಕರ್ಣದ ಬೀಚ್ ಕ್ರಿಕೆಟ್‌ಗೆ ಮನಸೋತ ಐಸಿಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts