ಮಹಿಳಾ ಐಪಿಎಲ್​ ರೀತಿಯಲ್ಲಿ ಮಹಿಳಾ ಕಬಡ್ಡಿ ಲೀಗ್​ ಆರಂಭ ಯಾವಾಗ? ಚಾರು ಶರ್ಮ ಉತ್ತರ ಹೀಗಿದೆ…

pro kabddi womnwe
Published on

ನವದೆಹಲಿ: ಬಿಸಿಸಿಐ ಆರ್ಥಿಕವಾಗಿ ಪ್ರಬಲವಾಗಿರುವ ನಡುವೆಯೂ ಐಪಿಎಲ್​ ಆರಂಭಗೊಂಡು 15 ವರ್ಷಗಳು ಕಳೆದ ಬಳಿಕ ಮಹಿಳೆಯರಿಗೂ ಟಿ20 ಲೀಗ್​ ಆರಂಭಿಸಿತು. ಹೀಗಾಗಿ ಕಬಡ್ಡಿಯಲ್ಲೂ ಮಹಿಳೆಯರಿಗೆ ಕಬಡ್ಡಿ ಲೀಗ್​ ಆರಂಭಿಸಲು ವಾಣಿಜ್ಯ ಸವಾಲುಗಳಿವೆ. ಅವುಗಳನ್ನು ನಿವಾರಿಸಿಕೊಂಡು ನಾವು ಮಹಿಳಾ ಕಬಡ್ಡಿ ಲೀಗ್​ ಆರಂಭಿಸಬೇಕಾಗಿದೆ. ಅದಕ್ಕಾಗಿ ಎಲ್ಲರೂ ತಾಳ್ಮೆಯಿಂದ ಕಾಯಬೇಕು ಎಂದು ಪ್ರೊ ಕಬಡ್ಡಿ ಲೀಗ್​ ಸಂಸ್ಥಾಪಕ ಮತ್ತು ತಾಂತ್ರಿಕ ಸಮಿತಿ ಸದಸ್ಯ ಚಾರು ಶರ್ಮ ಹೇಳಿದ್ದಾರೆ.

ನಮ್ಮ ಉತ್ತಮ ಕಬಡ್ಡಿ ಆಟಗಾರ್ತಿಯರಿಗೆ ಕೊರತೆ ಇಲ್ಲ. ಆದರೆ ಮಹಿಳಾ ಕಬಡ್ಡಿ ಲೀಗ್​ ಯಶಸ್ಸು ಕಾಣಲು ವಾಣಿಜ್ಯ ಸವಾಲುಗಳನ್ನು ಗೆಲ್ಲುವುದು ಅತಿಮುಖ್ಯವಾಗಿದೆ ಎಂದು ಚಾರು ಶರ್ಮ ಅವರು ಮಹಿಳಾ ಕಬಡ್ಡಿ ಲೀಗ್​ ಆರಂಭಿಸುವ ಸವಾಲುಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಡಿಸೆಂಬರ್​ 2ರಂದು ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿ ಆರಂಭಗೊಳ್ಳಲಿದೆ ಎಂದು ಟೂರ್ನಿಯ ಸಂಟಕ ಮಶಾಲ್​ ಸ್ಪೋರ್ಟ್ಸ್​ ಗುರುವಾರ ಘೋಷಿಸಿದೆ. ಜತೆಗೆ ಈ ಹಿಂದೆ ಕ್ಯಾರವಾನ್​ ಮಾದರಿಯಲ್ಲೇ ಟೂರ್ನಿಯ ಪಂದ್ಯಗಳು ದೇಶದ 12 ನಗರಗಳಿಗೆ ವಿಸ್ತರಿಸುವುದು ಕೂಡ ಖಚಿತಗೊಂಡಿದೆ. ಪ್ರೊ ಕಬಡ್ಡಿ ಲೀಗ್​ಗೆ ಮುನ್ನ ಭಾರತದ ಪ್ರಮುಖ ಕಬಡ್ಡಿ ಆಟಗಾರರು ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 8ರವರೆಗೆ ಚೀನಾದಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net