More

  ಆರ್​ಸಿಬಿ ಆಟಗಾರ ಆಡಿದಂತಹ ಆ ಮಾತುಗಳೇ ಸ್ಪೋಟಕ ಬ್ಯಾಟಿಂಗ್​ಗೆ ಸ್ಪೂರ್ತಿ; ಎಸ್​ಆರ್​ಎಚ್​ ಆಟಗಾರನ ಹೇಳಿಕೆ ವೈರಲ್

  ನವದೆಹಲಿ: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಮುಕ್ತಾಯಗೊಂಡು ವಿಶ್ವಕಪ್​ ಆರಂಭವಾಗಿದ್ದು, ಜನರು ಐಪಿಎಲ್​ನ ಹ್ಯಾಂಗ್​ಓವರ್​ನಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್​ನಲ್ಲಿ ರನ್​ ಹೊಳೆಯೇ ಹರಿದಿದ್ದು, ಹಲವು ದಾಖಲೆಗಳು ಸೃಷ್ಟಿಯಾಗಿದೆ. ದಾಖಲೆ ಸೃಷ್ಟಿಸಿದ ಯಾವುದಾದರು ತಂಡ ಇದ್ದರೆ ಮೊದಲಿಗೆ ಕೇಳಿ ಬರುವ ಹೆಸರಿ ಕಾವ್ಯಾ ಮಾರನ್​ ಒಡೆತನದ ಸನ್​ರೈಸರ್ಸ್​ ಹೈದರಾಬಾದ್​ ಎಂದು ಹೇಳಬಹುದಾಗಿದೆ.

  ಎಸ್​ಆರ್​ಎಚ್​ ಪರ ಟ್ರಾವಿಸ್​ ಹೆಡ್​, ಅಭಿಷೇಕ್​ ಶರ್ಮಾ, ಹೆನ್ರಿಚ್​ ಕ್ಲಾಸೆನ್​, ಏಡೆನ್​ ಮಾರ್ಕ್​ರಾಮ್​ ಸ್ಪೋಟಕ ಆಟವಾಡುವ ಮೂಲಕ ತಂಡದ ಪರ ಹಲವು ದಾಖಲೆಗಳನ್ನು ಸೃಷ್ಟಿಸಿದ್ದರು. ಇನ್ನೂ ಈ ಕುರಿತು ಮಾತನಾಡಿರುವ ಎಸ್​ಆರ್​ಎಚ್​ ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಹೆನ್ರಿಚ್​ ಕ್ಲಾಸೆನ್​ ಆರ್​ಸಿಬಿ ತಂಡದ ಆಟಗಾರ ನೀಡಿದ ಸಲಹೆ ಮೇರೆಗೆ ಅವರು ಟೂರ್ನಿಯಲ್ಲಿ ಸಿಕ್ಸರ್​ ಸಿಡಿಸಿ ಹೆಚ್ಚು ರನ್​ ಗಳಿಸಲು ಸಹಾಯ ಮಾಡಿತ್ತು ಎಂದು ಹೇಳಿದ್ದಾರೆ.

  heinrich klaasen

  ಇದನ್ನೂ ಓದಿ: ಡಾ.ಸಿ.ಎನ್. ಮಂಜುನಾಥ್ ವಿರುದ್ಧ ಸೋಲು; ರಾಜಕೀಯದಲ್ಲಿ ತಂತ್ರ-ಕುತಂತ್ರ ಕೆಲಸ ಮಾಡುತ್ತದೆ ಎಂದ ಡಿ.ಕೆ. ಸುರೇಶ್​

  ಈ ಕುರಿತು ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕ್ಲಾಸೆನ್​, ಇತ್ತೀಚಿಗೆ ನಾನು ಫಾಫ್​ನೊಟ್ಟಿಗೆ ಮಾತನಾಡುವಾಗ ಐಪಿಎಲ್​ನಲ್ಲಿ ನೀವು ಹೆಚ್ಚು ರನ್​ ಗಳಿಸಲು ಯಾವ ಅಂಶ ನಿಮಗೆ ಸಹಾಯ ಮಾಡಿತ್ತು ಎಂದು ಕೇಳಿದೆ. ಇದಕ್ಕೆ ಉತ್ತರಿಸಿದ ಅವರು, ಐಪಿಎಲ್​ನಲ್ಲಿ ಯಾರು ಅತಿ ಹೆಚ್ಚು ಸಿಕ್ಸರ್​ ಸಿಡಿಸಿ ತಂಡವನ್ನು ಗೆಲ್ಲಿಸುತ್ತಾರೋ ಅಂತಹವರ ಬಗ್ಗೆ ಮಾಲೀಕರು ಹೆಚ್ಚು ಯೋಚನೆ ಮಾಡುತ್ತಾರೆ.

  ಭಾರತದಲ್ಲಿ, ಎಲ್ಲಾ ಮೈದಾನಗಳು ತುಲನಾತ್ಮಕವಾಗಿ ಚಿಕ್ಕದಾಗಿದೆ ಎಂದು ನನಗೆ ಅನಿಸುತ್ತದೆ. ಆಶಾದಾಯಕವಾಗಿ, ಅದು ಹಾಗೆಯೇ ಇರುತ್ತದೆ, ಸಿಕ್ಸರ್‌ಗಳನ್ನು ಹೊಡೆಯುವುದು ಸ್ವಲ್ಪ ಸುಲಭವಾಗುತ್ತದೆ ಎಂದು ಎಸ್​ಆರ್​ಎಚ್​ ಆಟಗಾರ ಹೆನ್ರಿಚ್​ ಕ್ಲಾಸೆನ್​ ಹೇಳಿದ್ದಾರೆ. ಇತ್ತ ಎಸ್​ಆರ್​ಎಚ್​ ಆಟಗಾರನ ಹೇಳಿಕೆ ಸಖತ್​ ವೈರಲ್​ ಆಗಿದ್ದು, ಆರ್​ಸಿಬಿ ನಾಯಕನಿಂದ ಪಡೆದ ಸಲಹೆಯೇ ಇವರ ಸ್ಪೋಟಕ ಬ್ಯಾಟಿಂಗ್​ಗೆ ಸ್ಪೂರ್ತಿ ಎಂದು ಹೇಳಲಾಗಿದೆ.

  See also  ವಾಕ​ಥಾನ್​ಗೂ ಮುನ್ನ ಹಿಟ್​​ ಸಾಂಗ್ಸ್​ ಸ್ಟೆಪ್ಸ್ ಹಾಕಿದ ಲೇಡಿಸ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts