ಐಪಿಎಲ್‌ಗೆ ಸಿಂಧನೂರಿನ ಮನೋಜ್ ಭಾಂಡಗೆ ಆಯ್ಕೆ: RCB ಬಳಗ ಸೇರಿದ ಕನ್ನಡಿಗ, ಫ್ಯಾನ್ಸ್​ ಸಂಭ್ರಮಾಚರಣೆ

Manoj
Published on

ರಾಯಚೂರು: ನಿನ್ನೆ (ಡಿ. 23) ಕೇರಳದ ಕೊಚ್ಚಿಯಲ್ಲಿ ನಡೆದ 2023ನೇ ಸಾಲಿನ ಮಿನಿ ಐಪಿಎಲ್​ ಹರಾಜಿನಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಮನೋಜ್ ಭಾಂಡಗೆ ಆಯ್ಕೆಯಾಗಿದ್ದಾರೆ.

ಮನೋಜ್​ ಅವರನ್ನು 20 ಲಕ್ಷ ರೂ.ಗಳಿಗೆ ಆರ್​ಸಿಬಿ ತಂಡ ಖರೀದಿಸಿದೆ. ಇದರ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಹಾಗೂ ಮನೋಜ್​ ಅವರ ಅಭಿಮಾನಿಗಳು ಸಿಂಧನೂರಿನಲ್ಲಿ ಬೈಕ್ ರ್ಯಾಲಿ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

ಸಿಂಧನೂರಿನ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕೆಪಿಎಲ್, ಮಹಾರಾಜ ಟ್ರೋಫಿ, ಮುಸ್ತಕ್ ಅಲಿ ಟ್ರೋಫಿಯಲ್ಲಿ ಮನೋಜ್​ ಉತ್ತಮ ಪ್ರದರ್ಶನ ನೀಡಿದ್ದರು.

ಆಲ್‌ರೌಂಡರ್ ಆಟಗಾರನಾಗಿರುವ ಮನೋಜ್​, 16 ಮತ್ತು 19 ವರ್ಷದೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲಿ ಎಂಬುದು ಮನೋಜ್​ ಅವರ ಅಭಿಮಾನಿಗಳ ಆಶಯವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net