IPL ಮೆಗಾ ಹರಾಜಿಗೆ ಮುಹೂರ್ತ್​ ಫಿಕ್ಸ್​; ರಿಯಾದ್​ನಿಂದ ಬೇರೆಡೆಗೆ ಶಿಫ್ಟ್​, 10 ತಂಡಗಳ ಪರ್ಸ್​ ವಿವರ ಹೀಗಿದೆ

ipl 2025
Published on

ಮುಂಬೈ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್​ಗೆ (IPL) ಸಂಬಂಧಿಸಿದಂತೆ ನವೆಂಬರ್ 24 ಹಾಗೂ 25ರಂದು ಮೆಗಾ ಹರಾಜು (Mega Auction) ನಡೆಯಲಿದ್ದು, ಮೆಗಾ ಹರಾಜಿಗಾಗಿ ಬರೋಬ್ಬರಿ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 1,165 ಭಾರತೀಯ ಆಟಗಾರರಿದ್ದರೆ, 409 ವಿದೇಶಿ ಆಟಗಾರರಿದ್ದಾರೆ.

ಈ ಹಿಂದೆ ಸಿಂಗಾಪುರ್, ದುಬೈ ಅಥವಾ ಲಂಡನ್​ನಲ್ಲಿ ಮೆಗಾ ಆಕ್ಷನ್ (Mega Auction) ನಡೆಯಲಿದೆ ಎಂದು ವರದಿಯಾಗಿತ್ತು. ಆದರೀಗ ಸೌದಿ ಅರೇಬಿಯಾದಲ್ಲಿ  ಮೆಗಾ ಹರಾಜು ನಡೆಯಲಿದೆ. ಅದರಂತೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ಐಪಿಎಲ್​ (IPL) ಮೆಗಾ ಹರಾಜು ನಡೆಯಲಿದೆ. ಈ ಮೊದಲು ರಿಯಾದ್​ನಲ್ಲಿನಡೆಯಲಿದೆ ಎಂದು ಹೇಳಲಾಗಿತ್ತಾದರು. ಇದೀಗ ಜಿದ್ದಾದಲ್ಲಿ (Jeddah) ನಡೆಯುವುದು ಪಕ್ಕಾ ಆಗಿದೆ.

ನೋಂದಣಿ ವಿವರ ಹೀಗಿದೆ

  • ರಾಷ್ಟ್ರೀಯ ತಂಡದ ಪರ ಆಡಿದ ಭಾರತೀಯರು – 48 ಆಟಗಾರರು
  • ರಾಷ್ಟ್ರೀಯ ತಂಡದ ಪರ ಆಡಿದ ವಿದೇಶಿಯರು- 272 ಆಟಗಾರರು
  • ಹಿಂದಿನ ಐಪಿಎಲ್ ಸೀಸನ್‌ಗಳ ಭಾಗವಾಗಿದ್ದ ಅನ್‌ಕ್ಯಾಪ್ಡ್ ಭಾರತೀಯರು- 152 ಆಟಗಾರರು
  • ಹಿಂದಿನ ಐಪಿಎಲ್​ ಸೀಸನ್‌ಗಳ ಭಾಗವಾಗಿದ್ದ ಅನ್‌ಕ್ಯಾಪ್ಡ್ ವಿದೇಶಿಯರು- 3 ಆಟಗಾರರು
  • ಅನ್‌ಕ್ಯಾಪ್ಡ್ ಭಾರತೀಯರು- 965 ಆಟಗಾರರು
  • ಅನ್‌ಕ್ಯಾಪ್ಡ್ ವಿದೇಶಿಯರು- 104 ಆಟಗಾರರು

ರಿಟೇನ್​ ಹಾಗೂ ಪರ್ಸ್​ ವಿವರ ಹೀಗಿದೆ 

ಆರ್​ಸಿಬಿ (RCB)

  • ವಿರಾಟ್​ ಕೊಹ್ಲಿ (21 ಕೋಟಿ ರೂ.) 
  • ರಜತ್​ ಪಾಟಿದಾರ್​ (11 ಕೋಟಿ ರೂ.) 
  • ಯಶ್​ ದಯಾಳ್​ (5 ಕೋಟಿ ರೂ.) 
  • ಆರ್​ಟಿಎಮ್​: 03
  • ಪರ್ಸ್​ನಲ್ಲಿರುವ ಮೊತ್ತ: 83 ಕೋಟಿ ರೂ. 

ಪಂಜಾಬ್ ಕಿಂಗ್ಸ್ (PBKS)

  • ಶಶಾಂಕ್ ಸಿಂಗ್ (₹5.5 ಕೋಟಿ ರೂ.)
  • ಪ್ರಭ್​ಸಿಮ್ರಾನ್ ಸಿಂಗ್ (₹4 ಕೋಟಿ ರೂ.)
  • ಆರ್‌ಟಿಎಮ್​: 04
  • ಪರ್ಸ್​ನಲ್ಲಿರುವ ಮೊತ್ತ ₹110.5 ಕೋಟಿ ರೂ.

ಮುಂಬೈ ಇಂಡಿಯನ್ಸ್​ (MI) 

  • ಜಸ್ಪ್ರೀತ್ ಬುಮ್ರಾ (₹18 ಕೋಟಿ ರೂ.)
  • ಹಾರ್ದಿಕ್ ಪಾಂಡ್ಯ (₹16.35 ಕೋಟಿ ರೂ.)
  • ಸೂರ್ಯಕುಮಾರ್ ಯಾದವ್ (₹16.35 ಕೋಟಿ ರೂ.)
  • ರೋಹಿತ್ ಶರ್ಮಾ (₹16.30 ಕೋಟಿ ರೂ.)
  • ತಿಲಕ್ ವರ್ಮಾ (₹8 ಕೋಟಿ ರೂ.)
  • ಆರ್​ಟಿಎಮ್​: 01
  • ಪರ್ಸ್​ನಲ್ಲಿರುವ ಮೊತ್ತ: 45 ಕೋಟಿ ರೂ. 

ಚೆನ್ನೈ ಸೂಪರ್ ಕಿಂಗ್ಸ್ (CSK) 

  • ಋತುರಾಜ್ ಗಾಯಕ್ವಾಡ್ (₹18 ಕೋಟಿ ರೂ.)
  • ರವೀಂದ್ರ ಜಡೇಜಾ (₹18 ಕೋಟಿ ರೂ.)
  • ಮಥೀಶ ಪತಿರಾನ (₹13 ಕೋಟಿ ರೂ.)
  • ಶಿವಂ ದುಬೆ (₹12 ಕೋಟಿ ರೂ.)
  • ಎಂಎಸ್ ಧೋನಿ (ಅನ್‌ಕ್ಯಾಪ್ಡ್. ₹ 4 ಕೋಟಿ ರೂ.)
  • ಆರ್‌ಟಿಎಮ್​: 01
  • ಪರ್ಸ್​ನಲ್ಲಿರುವ ಮೊತ್ತ : ₹55 ಕೋಟಿ ರೂ.

ಕಲ್ಕತ್ತಾ ನೈಟ್​ರೈಡರ್ಸ್​ (KKR) 

  • ರಿಂಕು ಸಿಂಗ್ (₹13 ಕೋಟಿ ರೂ.)
  • ವರುಣ್ ಚಕ್ರವರ್ತಿ (₹12 ಕೋಟಿ ರೂ.)
  • ಸುನಿಲ್ ನರೇನ್ (₹12 ಕೋಟಿ ರೂ.)
  • ಆಂಡ್ರೆ ರಸೆಲ್ (₹12 ಕೋಟಿ ರೂ.)
  • ಹರ್ಷಿತ್ ರಾಣಾ (ಅನ್‌ಕ್ಯಾಪ್ಡ್, ₹ 4 ಕೋಟಿ ರೂ.)
  • ರಮಣದೀಪ್ ಸಿಂಗ್ (ಅನ್‌ಕ್ಯಾಪ್ಡ್, ₹ 4 ಕೋಟಿ ರೂ.)
  • ಆರ್‌ಟಿಎಮ್​: 0
  • ಪರ್ಸ್​ನಲ್ಲಿರುವ ಮೊತ್ತ: ₹51 ಕೋಟಿ ರೂ. 

ರಾಜಸ್ಥಾನ ರಾಯಲ್ಸ್ (RR) 

  • ಸಂಜು ಸ್ಯಾಮ್ಸನ್ (₹18 ಕೋಟಿ ರೂ.)
  • ಯಶಸ್ವಿ ಜೈಸ್ವಾಲ್ (₹18 ಕೋಟಿ ರೂ.)
  • ರಿಯಾನ್ ಪರಾಗ್ (₹14 ಕೋಟಿ ರೂ.)
  • ಧ್ರುವ್ ಜುರೆಲ್ (₹14 ಕೋಟಿ ರೂ.)
  • ಶಿಮ್ರಾನ್ ಹೆಟ್ಮೆಯರ್ (₹11 ಕೋಟಿ ರೂ.)
  • ಸಂದೀಪ್ ಶರ್ಮಾ (ಅನ್‌ಕ್ಯಾಪ್ಡ್,₹ 4 ಕೋಟಿ ರೂ.)
  • ಆರ್‌ಟಿಎಮ್:​ 0
  • ಪರ್ಸ್​​ನಲ್ಲಿರುವ ಮೊತ್ತ: ₹41 ಕೋಟಿ ರೂ.

ಗುಜರಾತ್ ಟೈಟಾನ್ಸ್ (GT) 

  • ರಶೀದ್ ಖಾನ್ (₹18 ಕೋಟಿ ರೂ.)
  • ಶುಭಮನ್ ಗಿಲ್ (₹16.5 ಕೋಟಿ ರೂ.)
  • ಸಾಯಿ ಸುದರ್ಶನ್ (₹8.5 ಕೋಟಿ  ರೂ.)
  • ರಾಹುಲ್ ತೆವಾಟಿಯಾ (₹4 ಕೋಟಿ ರೂ.)
  • ಶಾರುಖ್ ಖಾನ್ (₹4 ಕೋಟಿ ರೂ.)
  • ಆರ್‌ಟಿಎಮ್​: 01
  •  ಪರ್ಸ್​ನಲ್ಲಿರುವ ಮೊತ್ತ: ₹69 ಕೋಟಿ ರೂ.

ಲಕ್ನೋ ಸೂಪರ್ ಜೈಂಟ್ಸ್ (LSG)

  • ನಿಕೋಲಸ್ ಪೂರನ್ (₹21 ಕೋಟಿರೂ.)
  • ಮಯಾಂಕ್ ಯಾದವ್ (₹11 ಕೋಟಿ ರೂ.)
  • ರವಿ ಬಿಷ್ಣೋಯ್ (₹11 ಕೋಟಿ ರೂ.)
  • ಮೊಹ್ಸಿನ್ ಖಾನ್ (ಅನ್‌ಕ್ಯಾಪ್ಡ್, ₹4 ಕೋಟಿ ರೂ.)
  • ಆಯುಷ್ ಬದೋನಿ (ಅನ್‌ಕ್ಯಾಪ್ಡ್, ₹4 ಕೋಟಿ ರೂ.)
  • ಆರ್​ಟಿಎಮ್​: 01
  • ಪರ್ಸ್​ನಲ್ಲಿರುವ ಮೊತ್ತ : ₹69 ಕೋಟಿ ರೂ.

ಡೆಲ್ಲಿ ಕ್ಯಾಪಿಟಲ್ಸ್ (DC) 

  • ಅಕ್ಷರ್ ಪಟೇಲ್ (₹16.5 ಕೋಟಿ ರೂ.)
  • ಕುಲದೀಪ್ ಯಾದವ್ (₹13.25 ಕೋಟಿ ರೂ.)
  • ಟ್ರಿಸ್ಟನ್ ಸ್ಟಬ್ಸ್ (₹10 ಕೋಟಿ ರೂ.)
  • ಅಭಿಷೇಕ್ ಪೊರೆಲ್ (ಅನ್‌ಕ್ಯಾಪ್ಡ್ ₹4 ಕೋಟಿ ರೂ.) 
  • ಆರ್‌ಟಿಎಮ್​: 02
  • ಪರ್ಸ್​ನಲ್ಲಿರುವ ಮೊತ್ತ: ₹76.25 ಕೋಟಿ ರೂ.

ಸನ್‌ರೈಸರ್ಸ್ ಹೈದರಾಬಾದ್ (SRH) 

  • ಪ್ಯಾಟ್ ಕಮ್ಮಿನ್ಸ್ (₹18 ಕೋಟಿ ರೂ.)
  • ಅಭಿಷೇಕ್ ಶರ್ಮಾ (₹14 ಕೋಟಿ ರೂ.)
  • ನಿತೀಶ್ ಕುಮಾರ್ ರೆಡ್ಡಿ (₹6 ಕೋಟಿ ರೂ.)
  • ಹೆನ್ರಿಕ್ ಕ್ಲಾಸೆನ್ (₹23 ಕೋಟಿ ರೂ.)
  • ಟ್ರಾವಿಸ್ ಹೆಡ್ (₹14 ಕೋಟಿ ರೂ.)
  • ಆರ್‌ಟಿಎಮ್​: 04
  • ಪರ್ಸ್​ನಲ್ಲಿರುವ ಮೊತ್ತ: ₹45 ಕೋಟಿ ರೂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net