

ಚೆನ್ನೈ: ಹಾಲಿ ಐಪಿಎಲ್ ಆವೃತ್ತಿಯಲ್ಲ ಉತ್ತಮ ಪ್ರದರ್ನಶದ ಮೂಲಕ ಪ್ಲೇಆಫ್ ಟಿಕೆಟ್ಅನ್ನು ಬಹುತೇಕ ಖಚಿತಪಡಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ಮೇ 12ರಂದು ನಡೆಯುವ 61ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ. ಇನ್ನೂ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆದ್ದರೆ ಪ್ಲೇಆಫ್ ಪ್ರವೇಶಿಸಿದ ಎರಡನೇ ತಂಡವಾಗುತ್ತದೆ.
ಇನ್ನೂ ಈ ಕುರಿತು ಮಾತನಾಡಿರುವ ರಾಜಸ್ಥಾನ ರಾಯಲ್ಸ್ ಆಲ್ರೌಂಡರ್ ಡೊನೊವನ್ ಫೆರೇರಾ, ಲೆಕ್ಕಾಚಾರದ ಪ್ರಕಾರ ತಂಡ ಇಷ್ಟೊತ್ತಿಗಾಗಲೇ ಪ್ಲೇಆಫ್ಗೆ ಪ್ರವೇಶ ಪಡೆಯಬೇಕಿತ್ತು. ಆದರೆ, ಬಾಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ನಮಗೆ ಉತ್ತಮ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಾಗೆ ನೋಡಿದರೆ ನಾವು ಈ ವೇಳೆಗಾಗಲೇ ಐಪಿಎಲ್ ಪ್ಲೇಆಫ್ ಪ್ರವೇಶಿಸಿರಬೇಕಿತ್ತು. ಆದರೆ, ಐಪಿಎಲ್ ಒಂದು ದೊಡ್ಡ ಟೂರ್ನಿ ಆಗಿರುವುದರಿಂದ ದ್ವಿತಿಯಾರ್ಧ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲಾರ್ಧದಲ್ಲಿ ನಾವು ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ ಹಾದಿಯನ್ನು ಸುಗಮವಾಗಿಸಿಕೊಂಡೆವು. ಆದರೆ, ದ್ವಿತಿಯಾರ್ಧದಲ್ಲಿನ ಕೆಲವು ಸೋಲುಗಳು ನಮ್ಮ ಪ್ಲೇಆಫ್ ಪ್ರವೇಶಿಸುವುನ್ನು ಸ್ವಲ್ಪ ತಡ ಮಾಡಿತ್ತು. ಸಿಎಸ್ಕೆ ವಿರುದ್ಧದ ಪಂದ್ಯ ನಮಗೆ ಬಹಳ ಮುಖ್ಯವಾಗಿದ್ದು, ನಮ್ಮ ಗುರಿ ಇರುವುದು ಗೆಲುವಿನ ಕಡೆ ಎಂದಿದ್ದಾರೆ.
ನಾವು ಈ ಪಂದ್ಯವನ್ನು ಗೆದ್ದರೆ ಎರಡನೇ ತಂಡವಾಗಿ ಪ್ಲೇಆಫ್ ಪ್ರವೇಶಿಸುತ್ತೇವೆ. ಇದಾದ ಬಳಿಕ ಇನ್ನೆರಡು ಪಂದ್ಯಗಳು ಬಾಕಿ ಉಳಿದಿದ್ದು, ರಿಸ್ಕ್ ತೆಗೆದುಕೊಳ್ಳಲು ನಾವು ತಯಾರಿಲ್ಲ. ಹೀಗಾಗಿ ನಾವು ಚೆನ್ನಯ ವಿರುದ್ಧದ ಪಂದ್ಯದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡರ್ ಡೊನೊವನ್ ಫೆರೇರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.