ಚಂಡೀಗಂಢ: ಹಿಂದಿನ ಪಂದ್ಯದಲ್ಲಿ ಅಂತಿಮ ಓವರ್ಗಳಲ್ಲಿ ಸೋಲು ಅನುಭವಿಸಿರುವ ತಂಡಗಳಾದ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಐಪಿಎಲ್-17ರಲ್ಲಿ ಶನಿವಾರ ಮುಖಾಮುಖಿಯಾಗುತ್ತಿವೆ.
ಇದನ್ನೂ ಓದಿ: ಮೋದಿಯವರು ಯಾವ ಮುಖ ಇಟ್ಕೊಂಡು ಮೈಸೂರಿಗೆ ಬರ್ತಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಚಂಡೀಗಂಢದ ಮುಲ್ಲಾನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಎರಡೂ ತಂಡಗಳು ಗೆಲುವಿನ ಓಟವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.
ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ವಿರುದ್ಧ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ ರಾಯಲ್ಸ್ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಅತಿಥೇಯ ಶಿಖರ್ ಧವನ್ ಪಡೆ ಫ್ಲೇಆಪ್ ಅವಕಾಶ ವೃದ್ದಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದರೆ ಸಂಜು ಸ್ಯಾಮ್ಸನ್ ಬಳಗ ಜಯದ ಹಾದಿಗೆ ಮರಳುವ ನಿರೀಕ್ಷೆಯಲ್ಲಿವೆ.
ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ಹಿಂದಿನ ಪಂದ್ಯಗಳನ್ನು ಗುಜರಾತ್ ಟೈಟಾನ್ಸ್ಗೆ ಶರಣಾಗಿತ್ತು. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು 1 ಸೋಲಿನೊಂದಿಗೆ 8 ಅಂಕ ಕಲೆ ಹಾಕಿರುವ ರಾಜಸ್ಥಾನ ರಾಯಲ್ಸ್ ಟೂರ್ನಿಯಲ್ಲಿ ಸಮತೋಲನ ಹೊಂದಿರುವ ತಂಡ ಎನಿಸಿದೆ.
ಕಳೆದ ಆರು ಆವೃತ್ತಿಗಳಲ್ಲಿ ಕೇವಲ ಎರಡು ಬಾರಿ ಪ್ಲೇಆಪ್ಗೆ ಪಡೆದಿರುವ ಪಂಜಾಬ್ ಕಿಂಗ್ಸ್ ಅಸ್ಥಿರ ನಿರ್ವಹಣೆಯಿಂದ ಟೂರ್ನಿಯಲ್ಲಿ ಹೆಚ್ಚು ವೈಫಲ್ಯ ಕಂಡಿದೆ. ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು 3 ಸೋಲಿನೊಂದಿಗೆ 4 ಅಂಕ ಕಲೆಹಾಕಿದ್ದು ಜಯದ ಒತ್ತಡದಲ್ಲಿದೆ.
ಸಾಕುನಾಯಿ ಅನುಮಾನಾಸ್ಪದ ಸಾವು: ನ್ಯಾಯಕ್ಕಾಗಿ ಹೈಕೋರ್ಟ್ ಮೊರೆಹೋದ ಸ್ಟಾರ್ ನಟಿ!