More

    ಯೋಗ ದಿನಕ್ಕೆ ಕ್ಷಣಗಣನೆ:ವಿಜಯವಾಣಿ ಮಾಧ್ಯಮ ಸಹಯೋಗ

    ಶಿರಸಿ:ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಜೂ.21ರ ಬೆಳಗ್ಗೆ 5.30ಕ್ಕೆ ನಡೆಯಲಿದೆ. ವಿಶ್ವ ಮಾನ್ಯತೆ ಪಡೆದ ಭಾರತೀಯ ಹೆಮ್ಮೆಯ ಯೋಗ ನೆರವೇರಿಸಲು ತಾಲೂಕಿನ ಜನತೆ ಉತ್ಸುಕರಾಗಿದ್ದಾರೆ.
    ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಇಲ್ಲಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣಾ ಸಮಿತಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜಿಲ್ಲಾ ಯೋಗ ಫೆಡರೇಶನ್, ವಿದ್ಯಾನಗರ ರುದ್ರಭೂಮಿ ಸಮಿತಿ, ಟ್ರಸ್ಟ್‌ ಆಫ್ ಲಿವಿಂಗ್, ರೋಟರಿ ಐಎಂಎ ಕೇಂದ್ರ, ನಿಸರ್ಗ ಟ್ರಸ್ಟ್, ರೋಟರಿ ಕ್ಲಬ್, ಐಎಂಎ, ಎಸ್ ಪಿ ವೈ ಎಸ್ ಎಸ್, ಇನ್ನರ್ ವೀಲ್ ಕ್ಲಬ್, ಲಯನ್ಸ್ ಕ್ಲಬ್, ನಯನ ಫೌಂಡೇಶನ್, ಶಿರಸಿ ಇಂಜಿನಿರ‍್ಸ ಮತ್ತು ಆರ್ಕಿಟೆಕ್ಟ್ ಅಸೋಸಿಯೇಶನ್, ಸೀನಿಯರ್ ಚೇಂಬರ್ಸ್‌ ಶಿರಸಿ, ಗಾಯತ್ರಿ ಗೆಳೆಯರ ಬಳಗ, ಆದರ್ಶ ವನಿತಾ ಸಮಾಜ ಹಾಗೂ ಆರೋಗ್ಯ ಭಾರತಿ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
    200ಕ್ಕೂ ಅಧಿಕ ಜನ ಇಲ್ಲಿ ಬೆಳಗ್ಗೆ 5.30ರಿಂದ ಏಕ ಕಾಲದಲ್ಲಿ ಯೋಗ ಮಾಡಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೂ ಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ.
    ಡಾ. ಪೂರ್ಣಿಮಾ ಎಸ್. ಯೋಗಾಭ್ಯಾಸದ ಮಾರ್ಗದರ್ಶನ ನೀಡಲಿದ್ದಾರೆ. ಬಳಿಕ ರಾಷ್ಟ್ರೋನ್ನತಿಗಾಗಿ ಯೋಗದ ಮೂಲಕ ವಯಕ್ತಿಕ ಕೊಡುಗೆ ವಿಷಯವಾಗಿ ಶಿರಳಗೆಯ ಶ್ರೀ ಚೈತನ್ಯ ರಾಮಕ್ಷೇತ್ರದ ಶ್ರೀ ಭ್ರಹ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಾದ ಪೂರ್ವಕ ವಿಶೇಷ ಸಂದೇಶ ನೀಡಲಿದ್ದಾರೆ. ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗ ನೀಡಿದೆ.
    ಈ ಕುರಿತಂತೆ ವಿಜಯವಾಣಿಯೊಂದಿಗೆ ಮಾತನಾಡಿದ ಯೋಗ ಆಚರಣಾ ಸಮಿತಿಯ ಪ್ರಮುಖ ಶ್ರೀಕಾಂತ ಹೆಗಡೆ, ಪ್ರಪಂಚದ ಅನೇಕ ದೇಶಗಳು ಭಾರತದ ಯೋಗವನ್ನು ಒಪ್ಪಿಕೊಂಡಿವೆ. ಪ್ರತಿ ನಿತ್ಯ ಮನೆಯಲ್ಲಿ ಯೋಗ ಮಾಡುವವರು ಪ್ರಪಂಚದಾದ್ಯಂತ ಇದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಈ ಸುಸಂದರ್ಭದಲ್ಲಿ ನಗರದ ಮನೆ ಮನೆಯಿಂದಲೂ ಆಗಮಿಸಿ ಜನ ಪಾಲ್ಗೊಳ್ಳಲಿದ್ದು, ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

    See also  ಗ್ರಾಮದ ಬಳಿ ಜಿಂಕೆಯನ್ನು ಭೇಟೆಯಾಡಿ ತಿಂದ ಚಿರತೆ, ಜನರಲ್ಲಿ ಆತಂಕ
    https://www.vijayavani.net/half-day-holiday-in-schools-for-yoga-day-what-is-the-condition-imposed-by-the-government

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts