ಶ್ರೀ ಕ್ಷೇತ್ರ ಇಟಲದಲ್ಲಿ ಕೊಡಿಮರ ಪ್ರತಿಷ್ಠಾಪನೆ

New Project (14)
Published on

ಮೂಡುಬಿದಿರೆ: ದರೆಗುಡ್ಡೆ ಶ್ರೀ ಕ್ಷೇತ್ರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಏಪ್ರಿಲ್ 23ರಿಂದ ಮೇ 7ರ ವರೆಗೆ ನಡೆಯಲಿದ್ದು, ಇದರ ಅಂಗವಾಗಿ ಭಾನುವಾರ ಕೊಡಿಮರ (ಧ್ವಜಸ್ತಂಭ) ಪ್ರತಿಷ್ಠಾಪನೆ ನಡೆಯಿತು.

ಕೊಡಿಮರಕ್ಕೆ ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿರುವಾಗ ಗರುಡನ ಆಗಮನವಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

ಪಣಪಿಲ ಅರಮನೆ ವಿಮಲ್ ಕುಮಾರ್ ಶೆಟ್ಟಿ, ನರಸಿಂಹ ತಂತ್ರಿ, ರಾಘವೇಂದ್ರ ಭಟ್, ನಾಗರಾಜ್ ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ ಶಿರ್ತಾಡಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಆರಿಗ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net