ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಪ್ರತಿಷ್ಠಾಪನೆ

karandadi
ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಪ್ರತಿಷ್ಠಾಪನೆ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಜೀರ್ಣೋದ್ಧಾರಗೊಂಡ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಪ್ರತಿಷ್ಠಾಪನೆ ಸೋಮವಾರ ನೆರವೇರಿತು.

ಕಳತ್ತೂರು ಉದಯ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ ಸಹಭಾಗಿತ್ವದಲ್ಲಿ ಪುನಃ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ, ಪ್ರತಿಜ್ಞಾ ವಿಧಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಬಲಿಶಿಲಾ ಪ್ರತಿಷ್ಠಾಪನೆ, ಮಹಾಬಲಿ ಪೀಠ ಪ್ರತಿಷ್ಠಾಪನೆ, ಕ್ಷೇತ್ರಪಾಲ ಪ್ರತಿಷ್ಠಾಪನೆ, ಕಲಶ ಮಂಟಪ ಸಂಸ್ಕಾರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕರಂದಾಡಿಗುತ್ತು ಸತ್ಯಜಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ರಾವ್, ಕೋಶಾಧಿಕಾರಿ ಪದ್ಮನಾಭ ಶಾನುಭಾಗ್, ಸಮಿತಿ ಗೌರವಾಧ್ಯಕ್ಷರಾದ ಲಕ್ಷ್ಮೆ ಜಯರಾಮ ಶೆಟ್ಟಿ, ಪಾಂಡುರಂಗ ಶ್ಯಾನುಭಾಗ್, ಉಪಾಧ್ಯಕ್ಷರಾದ ವಿಠಲ ಶೆಟ್ಟಿ ಪಡುಬರ್ಪಾಣಿ, ಭಾಸ್ಕರ್ ಶೆಟ್ಟಿ ಬರ್ಪಾಣಿ, ಪ್ರೇಮನಾಥ ಶೆಟ್ಟಿ ಗುಡ್ಡಶೆಟ್ರಮನೆ, ಭಾಸ್ಕರ್ ಶೆಟ್ಟಿ ಕೆಳಮನೆ, ವಿಜಯ ಶೆಟ್ಟಿ ಕಾರ್ಕಳ, ದಿನೇಶ್ ಶೆಟ್ಟಿ ಪಡುಮನೆ, ನಿರಂಜನ್ ಶೆಟ್ಟಿ, ಮುದ್ದು ಪೂಜಾರಿ, ಕಾರ್ಯದರ್ಶಿಗಳಾದ ವಾಸುದೇವ ರಾವ್, ಉಮೇಶ್ ಶೆಟ್ಟಿ, ಮೋಹನ್ ಶೆಟ್ಟಿ, ರಾಮಚಂದ್ರ ಆಚಾರ್ಯ, ಪ್ರಜ್ಞಾ, ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಗೋಪಾಲ್ ನಾಯ್ಕ, ಮಜೂರು ಗ್ರಾಪಂ ಸದಸ್ಯರಾದ ಭಾಸ್ಕರ್ ಕುಮಾರ್, ಶರ್ಮಿಳಾ ಆಚಾರ್ಯ, ಪ್ರಮುಖರಾದ ರವಿರಾಜ ಶೆಟ್ಟಿ, ರಾಘವೇಂದ್ರ ಭಟ್, ತ್ರಿವಿಕ್ರಮ ಭಟ್, ಅಕ್ಷಯ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಯಾದವ ಕೃಷ್ಣ ಶೆಟ್ಟಿ, ದಯಾನಂದ ಶೆಟ್ಟಿ, ಶಶಿಧರ ಶೆಟ್ಟಿ, ಶಶಿಧರ ಶೆಟ್ಟಿ, ವಿಠಲ ಶೆಟ್ಟಿ, ಚಂದ್ರಶೇಖರ ರಾವ್, ನಿರ್ಮಲ್ ಕುಮಾರ್ ಹೆಗ್ಡೆ, ರವಿ ನಾಯ್ಕ, ಶರತ್ ಶೆಟ್ಟಿಗಾರ್, ರಾಘವೇಂದ್ರ ಭಟ್, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಮುಂಬೈ ಸಮಿತಿ, ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಇಂದು ವಿವಿಧ ಧಾರ್ಮಿಕ ಕಾರ‌್ಯಕ್ರಮ

ಫೆ.4ರಂದು ಬೆಳಗ್ಗೆ 8ರಿಂದ ನವಗ್ರಹ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ಕಲಶಮಂಡಲ ರಚನೆ ನಡೆಯಲಿದ್ದು, ಸಂಜೆ 7ರಿಂದ ಬ್ರಹ್ಮಸ್ಥಾನದಲ್ಲಿ ದುರ್ಗಾ ನಮಸ್ಕಾರ ಪೂಜೆ, ಸ್ಥಳೀಯ ಪ್ರತಿಭೆಗಳಿಂದ ಮತ್ತು ಕರಂದಾಡಿ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ, ಕರಂದಾಡಿ ಪ್ರಶಾಂತ್ ರಾವ್ ಮತ್ತು ದೀಪ್ತಿ ಪ್ರಶಾಂತ್ ಬಳಗದಿಂದ ಭಕ್ತಿ ಭಾವ ಗಾಯನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net