ಶಾಲೆಯಲ್ಲಿ ರಾಮನ ಮೂರ್ತಿ ಸ್ಥಾಪನೆ

New Project (26)
Published on

ಉಪ್ಪಿನಂಗಡಿ: ಕನ್ನಡ ಮಾತೃ ಭಾಷಾ ಶಿಕ್ಷಣ ಹಾಗೂ ಸಂಸ್ಕಾರ ಶಿಕ್ಷಣದಿಂದ ಗಮನ ಸೆಳೆದಿರುವ ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲೆಯಲ್ಲಿ ಹನುಮಂತ ಸಹಿತ ಶ್ರೀ ರಾಮನ ಮೂರ್ತಿಯನ್ನು ಜ.22ರಂದು ಸ್ಥಾಪಿಸಲಾಗುವುದು.

ಅಯೋಧ್ಯೆಯಲ್ಲಿ ಶ್ರೀ ರಾಮ ದೇವಾಲಯ ಲೋಕಾರ್ಪಣೆಗೊಂಡು ಇದೇ ಜನವರಿಗೆ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯುತ್ತಿರುವ ಕಾಲಘಟ್ಟದಲ್ಲೇ ಶ್ರೀ ರಾಮಭಕ್ತ ಹನುಮಂತ ಸಹಿತ ಶ್ರೀ ರಾಮನ ವಿಗ್ರಹವನ್ನು ಶಾಲಾ ಆವರಣದಲ್ಲಿ ಸ್ಥಾಪಿಸಲು ಶಾಲಾಡಳಿತ ಸಂಕಲ್ಪಿಸಿದೆ. ಅಂತೆಯೇ ವಿಗ್ರಹದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶಿಲಾಮಯ ಗುಡಿಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.

ಶಾಲೆ ಸ್ಥಾಪನೆಗೊಂಡು ಹದಿನೈದು ವರ್ಷ ಪೂರ್ಣೈಸುತ್ತಿರುವ ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಬದುಕಿಗೆ ಶ್ರೀ ರಾಮನ ಬದುಕು ಪ್ರೇರಣೆಯಾಗಲೆಂಬ ಸದುದ್ದೇಶದಿಂದ ಇಲ್ಲಿ ಶ್ರೀ ರಾಮನ ಮೂರ್ತಿ ಸ್ಥಾಪನೆಗೊಳ್ಳಲಿದೆ. 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾರ್ಯದಲ್ಲಿ ಭಾಗಿಯಾಗಲು ಸಾರ್ವಜನಿಕರ ಸಹಕಾರವನ್ನು ಯಾಚಿಸಲಾಗಿದೆ.

ಶ್ರೀ ರಾಮನ ಜೀವನಾದರ್ಶ ಸರ್ವತ್ರ ಮಾನ್ಯತೆಗೆ ಒಳಗಾಗಿದೆ. ಅಂತೆಯೇ ಮಕ್ಕಳಿಗೆ ಶ್ರೀ ರಾಮನಿಂದ ಸತ್‌ಪ್ರೇರಣೆ ಲಭಿಸಲಿ ಎಂಬ ಆಶಯದಿಂದ ಶಾಲಾ ಆವರಣದೊಳಗೆ ಶ್ರೀ ರಾಮನ ಮೂರ್ತಿಯನ್ನು ಸ್ಥಾಪಿಸಲು ನಿಶ್ಚಯಿಸಲಾಗಿದೆ. ಶಾಲಾ ಮಕ್ಕಳ ಸಹಿತ ಇಡೀ ಸಮಾಜದ ಉದ್ದಾರವಾಗುವ ನಿರೀಕ್ಷೆ ನಮ್ಮದಾಗಿದೆ ಎಂದು ಸುನೀಲ್ ಅನಾವು, ಶ್ರೀ ರಾಮ ಶಾಲಾಡಳಿತದ ಅಧ್ಯಕ್ಷ ನಮ್ಮೆಲ್ಲರ ಆರಾಧ್ಯಮೂರ್ತಿ ಶ್ರೀ ರಾಮನನ್ನು ನಮಿಸಿ-ಸ್ಮರಿಸಿ ಕಲಿಕೆಯನ್ನು ಪ್ರಾರಂಭಿಸಲು ಅವಕಾಶವನ್ನು ಕಲ್ಪಿಸುವ ಸಲುವಾಗಿ ಶಾಲಾ ಆವರಣದಲ್ಲಿ ಶ್ರೀ ರಾಮನ ಮೂರ್ತಿಯ ಸ್ಥಾಪನೆಯಾಗುತ್ತಿದೆ. ಇದರಿಂದಾಗಿ ದೇವ ಸ್ವರೂಪಿ ಮಕ್ಕಳಿಗೆ ದೇವರನ್ನು ತೀರಾ ಹತ್ತಿರದಿಂದ ಪೂಜಿಸುವ ಅವಕಾಶ ಪ್ರಾಪ್ತಿಯಾದಂತಾಗಿದೆ. ಉದಯ ಅತ್ರಮಜಲು, ಶಾಲಾ ಪೋಷಕ ಸಂಘದ ಅಧ್ಯಕ್ಷ https://www.vijayavani.net/mic-noise-in-the-mini-stadium https://www.vijayavani.net/mic-noise-in-the-mini-stadium \

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net