

ಕಡಬ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನ 16 ಗ್ರಾಪಂ ವ್ಯಾಪ್ತಿಯ ಜನರಿಗೆ ನೀರೊದಗಿಸುವ ಮಹತ್ವಾಕಾಂಕ್ಷಿ ಹೊಂದಿದ್ದು, ಕಾಮಗಾರಿ ಶ್ರೀ ಪೂರ್ಣಗೊಳ್ಳಲಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸವಣೂರು ಗ್ರಾಪಂ ವ್ಯಾಪ್ತಿಯ ಮಾಂತೂರಿನಲ್ಲಿ 230 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್., ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಪಿಡಿಒ ವಸಂತ ಶೆಟ್ಟಿ, ಕಡಬ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಚಾರ್ವಾಕ ಪ್ರಾ.ಕೃ.ಪ.ಸ. ಸಂಘ ಅಧ್ಯಕ್ಷ ಗಣೇಶ ಉದನಡ್ಕ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಉಪಾಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಗ್ರಾಪಂ ಸದಸ್ಯರಾದ ಅಬ್ದುಲ್ ರಜಾಕ್ ಕೆನರಾ, ಸತೀಶ್ ಅಂಗಡಿಮೂಲೆ, ಎಂ.ಎ. ರಫೀಕ್, ಶೀನಪ್ಪ ಶೆಟ್ಟಿ ನೆಕ್ರಾಜೆ, ಚಂದ್ರಾವತಿ ಸುಣ್ಣಾಜೆ, ನೌಕರ ಪ್ರಮೋದ್ ಕುಮಾರ್ ರೈ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಆಶಾ ರೈ ಕಲಾಯಿ, ಕೀರ್ತನ್ ಕೋಡಿಬೈಲು, ರಾಮಕೃಷ್ಣ ಪ್ರಭು ಮೊದಲಾದವರಿದ್ದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಕಾಮಗಾರಿ ಮಾಹಿತಿ ನೀಡಿದರು. ಸಹಾಯಕ ಇಂಜಿನಿಯರ್ ಎ.ಎಸ್.ಹುಕ್ಕೇರಿ, ಕುಡಿಯುವ ನೀರಿನ ಯೋಜನೆ ಇಂಜಿನಿಯರ್ ಈಶ್ವರ್ ಉಪಸ್ಥಿತರಿದ್ದರು.