ನಾಗರಾಜ ನಾಯ್ಕ ಇವರು ತಮ್ಮ ಜಮೀನು ನಲ್ಲಿ ಸಮಾರು 600 ಕ್ಕೂ ಹೆಚ್ಚು ಸಾoಪ್ರದಾಯಿಕ ಹಳೆಯ ಭತ್ತದ ತಳಿಗಳನ್ನು ಬೆಳೆಯತ್ತಿದ್ದು, ಇಂತಹ ಭತ್ತದ ತಳಿಗಳನ್ನು ಸಂರಕ್ಷಣಾ ಮಾಡುತಿರುವುದು ಶ್ಲಾಘನೀಯವಾಗಿದೆ . ಮುಖ್ಯವಾಗಿ ಘಜನಿ ಭೂಮಿಯಲ್ಲಿ ಬೆಳೆಯುವ ಕರಿ ಕಗ್ಗ ಹಾಗೂ ಬಿಳಿ ಕಗ್ಗ ತಳಿಗಳನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಇದಲ್ಲದೇ ಇವರು ಹಳೆಯ ಸಂಪ್ರಾದಾಯಿಕ ತಳಿಗಳ ಸಂರಕ್ಷಣೆಗೆ ಬಗ್ಗೆ ರೈತರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವ ಇವರಿಗೆ ಕೃಷಿ ವಿಜ್ಞಾನ ಕೇಂದ್ರ ಶಿರಸಿ ಹಾಗು ಕೃಷಿ ಇಲಾಖೆ ಉತ್ತರ ಕನ್ನಡ ಜಿಲ್ಲೆವತಿಯಿಂದ ಅಭಿನಂದಿಸಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.