ಗ್ರಾಪಂನಿಂದ ಶಾಲೆಗೆ ಮೂಲ ಸೌಕರ್ಯ

Infrastructure from gram to school
Infrastructure from gram to school
Published on

ಬಾದಾಮಿ: ಗ್ರಾಮದ ಸರ್ಕಾರಿ ಶಾಲೆಗೆ ಬೇಕಾದ ಮೂಲಸೌಕರ್ಯ ಒದಗಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಕಾತರಕಿ ಗ್ರಾಪಂ ಸದಸ್ಯ ಅಂದಾನಗೌಡ ಪಾಟೀಲ ಹೇಳಿದರು.

ತಾಲೂಕಿನ ಕಾತರಕಿ ಗ್ರಾಪಂನಿಂದ ಕಾತರಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯಿತಿಯಿಂದ ಶಾಲೆಗೆ ಬೇಕಾದ ಸೌಲಭ್ಯ ಒದಗಿಸಲು ನಮ್ಮ ಗ್ರಾಮದ ಎಲ್ಲ ಗ್ರಾಪಂ ಸದಸ್ಯರು ಬದ್ಧರಾಗಿದ್ದೇವೆ ಎಂದು ಹೇಳಿದರು.

ಶಾಲೆಯ ಮುಖ್ಯಶಿಕ್ಷಕ ಆರ್. ಎಂ. ಸಾರವಾಡ ಮಾತನಾಡಿದರು.

ವಿದ್ಯಾರ್ಥಿನಿ ಪೂರ್ಣಿಮಾ ಶಿವಪುರ ಅವರು ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯದ ಕೊರತೆ ಹಾಗೂ ಬಿಸಿ ಊಟದ ಕಟ್ಟಡ ರಿಪೇರಿ ಮತ್ತು ಶಾಲಾ ಕಾಂಪೌಂಡನ್ನು ಪೂರ್ಣಗೊಳಿಸುವ ಬಗ್ಗೆ, ಮಕ್ಕಳ ಗ್ರಾಮ ಸಭೆಯಲ್ಲಿ ಬೇಡಿಕೆಯನ್ನು ಮಂಡಿಸಿದರು. ಮಲ್ಲಿಕಾರ್ಜುನ ಹೆಗ್ರಿ ಅನುಮೋದಿಸಿದನು.

ಪಿಡಿಒ ಎಸ್.ಕೆ. ಕಂತಿಕಲ್ಲ ಮಾತನಾಡಿ, ಹೆಣ್ಣು ಮಕ್ಕಳ ಶೌಚಾಲಯ, ಶಾಲಾ ಕಾಂಪೌಂಡ್ ಹಾಗೂ ಬಿಸಿ ಊಟದ ಕೋಣೆಯ ನಿರ್ಮಾಣದ ಕೆಲಸವನ್ನು ತ್ವರಿತವಾಗಿ ಆರಂಭಿಸುತ್ತೇವೆ ಎಂದು ಮಕ್ಕಳ ಗ್ರಾಮ ಸಭೆಯಲ್ಲಿ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ರೇಣುಕಾ ರಾಮನಗೌಡ ಅಯ್ಯನಗೌಡ ಮಾತನಾಡಿ, ಶಾಲೆಗೆ ಅಗತ್ಯ ಸೌಲಭ್ಯ ಕ್ರಮವಹಿಸುವೆ ಎಂದರು.

ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಎಲ್.ಎಸ್. ವಿಟ್ಟಲಕೋಡ ಅವರು ಮಕ್ಕಳ ಹಕ್ಕುಗಳ ಕುರಿತು ಮಾತನಾಡಿದರು. ಆರೋಗ್ಯ ಇಲಾಖೆಯ ಶಶಿಕಲಾ ತೊರವಿ ಅವರು ಮಕ್ಕಳ ಆರೋಗ್ಯದ ಬಗ್ಗೆ ಮಾತನಾಡಿದರು.

ಗ್ರಾಪಂ ಸದಸ್ಯರಾದ ರಂಗಪ್ಪ ಹೊಸೂರ, ಗಂಗಾಧರ ಬಜಂತ್ರಿ, ಮಂಜಪ್ಪ ಹವೇಜಿ, ರಾಜೇಸಾಬ ನದಾ, ಸೈಯದ್ ಕೆರೂರ, ಖಾಜೆ ಸಾಬ್ ಕಾಜಿ, ಎಚ್.ಎಸ್. ಮಲ್ಲಾಪೂರ, ಶಿಕ್ಷಕರಾದ ಎಸ್.ಆರ್. ಕಾತರಕಿ, ಎಚ್.ಎನ್. ನರಸಾಪುರ, ಐ.ಎ ಸೋಲಾಪುರ, ಎಸ್.ಎಸ್.ಲೋಣಿ, ಎಲ್.ಎಸ್. ಗುಮಾಸ್ತೆ, ನಾಗರಾಜ ಹೊಸೂರ, ಕೃನಾಲ ಮಣ್ಣೂರ, ಅಡುಗೆ ಸಿಬ್ಬಂದಿ ಶಂಕ್ರಮ್ಮ ಮಂಗಳೂರು, ಗಿರಿಜಾ ದಳವಾಯಿ, ಸುವರ್ಣ ಹೂಗಾರ, ಪದ್ಮಾವತಿ ಕೋಳಿವಾಡ ಇದ್ದರು.

ವಿದ್ಯಾರ್ಥಿನಿ ಬಿಂದು ಗೌಡರ, ಶೃತಿ ರೇಷ್ಮೆ, ಸುಶ್ಮಿತಾ ರೋಣದ, ಪೂರ್ಣಿಮಾ ಶಿವಪುರ ಪ್ರಾರ್ಥನೆ ಹಾಡಿದರು. ಸುಧಾ ಗೌಡರ ಸ್ವಾಗತಿಸಿದರು. ಪೂರ್ಣಿಮಾ ಶಿವಪುರ ನಿರೂಪಣೆ ಮಾಡಿದರು. ಪ್ರೀತಮ್ ಹುಲ್ಲೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net