ಫಿಟ್ನೆಸ್​ ಟ್ರೇನರ್ ಆಗಿ ಹೆಚ್ಚು ಸಂಪಾದಿಸೋದು ಹೇಗೆ?; ಮನಿಮಾತು

Fitness
Published on
ದೈಹಿಕ ವ್ಯಾಯಾಮ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನೂ ಸದೃಢಗೊಳಿಸುತ್ತದೆ. ಸರಿಯಾದ ವ್ಯಾಯಾಮದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದ್ರೆ ಫಿಟ್ನೆಸ್ ಸೆಂಟರ್​ಗಳ ಜತೆ ಫಿಟ್ನೆಸ್ ಟ್ರೇನರ್​ಗಳು ಬೇಕು. ಮೊದಲಿಗೆ ಸಣ್ಣ ತರಬೇತುದಾರರ ಮಟ್ಟದಲ್ಲಿ ಆರಂಭವಾದ ಫಿಟ್ನೆಸ್ ಕ್ಷೇತ್ರ ಈಗ ಉದ್ಯಮವಾಗಿ ಬೆಳೆದು ಹಲವಾರು ಉದ್ಯೋಗಗಳನ್ನು ಸೃಷ್ಟಿಸುವ ಕೇಂದ್ರವಾಗಿ ಮಾರ್ಪಾಟಾಗಿದೆ. ಈ ಹಿನ್ನೆಲೆಯೊಂದಿಗೆ ಫಿಟ್ನೆಸ್ ಟ್ರೇನರ್ ಆಗುವುದು ಹೇಗೆ? ನಿಮ್ಮದೇ ಫಿಟ್ನೆಸ್ ಸೆಂಟರ್ ಆರಂಭಿಸುವುದು ಹೇಗೆ? ಟ್ರೇನರ್​ಗಳು ತಿಂಗಳಿಗೆ ಲಕ್ಷ ಲಕ್ಷ ಗಳಿಸೋದು ಹೇಗೆ? ಎಲ್ಲಿ ತರಬೇತಿ ಪಡೆಯಬೇಕು? ಸೆಲೆಬ್ರಿಟಿ ಟ್ರೇನರ್ ಆಗೋದು ಹೇಗೆ? ಹೀಗೆ ಫಿಟ್ನೆಸ್ ಇಂಡಸ್ಟ್ರೀಯಲ್ಲಿ ಬಿಸಿನೆಸ್ ಆರಂಭಿಸಬೇಕು ಅನ್ನೋರಿಗೆ ಅಗತ್ಯ ಮಾಹಿತಿ ಆ ಅಂಕಣದಲ್ಲಿದೆ.

ಫಿಟ್ನೆಸ್ ಮಹತ್ವ: ವರದಿಯೊಂದರ ಪ್ರಕಾರ ಶೇ.54 ಭಾರತೀಯರು ದೈಹಿಕವಾಗಿ ಆಲಸಿಗಳಾಗಿದ್ದಾರೆ. ಇನ್ನೂ ಇದರಿಂದಾಗಿರೋ ಸಮಸ್ಯೆಗಳ ಪಟ್ಟಿ ಕೇಳಿದ್ರೆ ನೀವು ಶಾಕ್ ಆಗ್ತೀರಿ. ನಮ್ಮ ದೇಶದಲ್ಲಿ ಒಟ್ಟಾರೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 14.5 ಕೋಟಿ, ಥೈರಾಯಿಡ್ ಸಮಸ್ಯೆ ಉಳ್ಳವರ ಸಂಖ್ಯೆ 6.2 ಕೋಟಿ, ಅಧಿಕ ರಕ್ತದೊತ್ತಡ ಇರುವವರ ಸಂಖ್ಯೆ 18 ಕೋಟಿ, ಇನ್ನು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 5.5 ಕೋಟಿ. ಇವೆಲ್ಲದರಿಂದ ಮುಕ್ತಿ ಪಡೆಯೋದಕ್ಕೆ ದಾರಿ ಇದೆ. ಅದುವೇ ದೈಹಿಕ ವ್ಯಾಯಾಮ.

ಫಿಟ್ನೆಸ್ ವಲಯದ ಮಾರುಕಟ್ಟೆ: ಆರೋಗ್ಯವೇ ಭಾಗ್ಯ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಈ ಭಾಗ್ಯ ತಮ್ಮದಾಗಿಸಿಕೊಳ್ಳೋದಕ್ಕೆ ಬಹಳಷ್ಟು ಜನ ಮುಗಿಬಿದ್ದಿದ್ದಾರೆ. ಹೀಗಾಗಿಯೆ ಫಿಟ್ನೆಸ್ ತರಬೇತಿ ಕೇಂದ್ರಗಳು ಮತ್ತು ಫಿಟ್ನೆಸ್ ತರಬೇತುದಾರರಿಗೆ ದಿನದಿಂದ ದಿನಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದೆ. ಮತ್ತೊಂದು ವಿಷಯ ಏನಪ್ಪಾ ಅಂದರೆ ಪ್ರಸ್ತುತ ನಮ್ಮ ದೇಶದಲ್ಲಿ ಫಿಟ್ನೆಸ್ ಇಂಡಸ್ಟ್ರಿಯ ಮಾರುಕಟ್ಟೆ ಮೌಲ್ಯ ಸರಿಸುಮಾರು 15 ಸಾವಿರ ಕೋಟಿ. ಭಾರತದ 64 ಪ್ರತಿಶತ ಜನರು ವ್ಯಾಯಾಮ ಮಾಡೋದೇ ಇಲ್ಲ ಅಂತ ವರದಿಯೊಂದು ಹೇಳಿದ್ರೆ, ಶೇ.53 ನಗರವಾಸಿಗಳು ವ್ಯಾಯಾಮದಲ್ಲಿ ಆಸಕ್ತಿ ಹೊಂದಿದ್ದರೂ ಅದಕ್ಕೆ ಅನುಗುಣವಾಗಿರುವ ಸಮಯ ಇಲ್ಲ ಅಂತ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನು ಮತ್ತಷ್ಟು ಜನರು ತಮಗೆ ಇದಕ್ಕೆ ಸರಿಹೊಂದುವಂತಹ ಮಾರ್ಗದರ್ಶಕರಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇವೆಲ್ಲವನ್ನು ಸರಿಪಡಿಸುವ ಸಲುವಾಗಿಯೇ ನಗರಗಳಲ್ಲಿ ಜಿಮ್ಳು, ಫಿಟ್ನೆಸ್ ಸೆಂಟರ್​ಗಳು ಮತ್ತು ಫಿಟ್ನೆಸ್ ಸಂಬಂಧಿತ ಆಪ್​ಗಳು ಸೃಷ್ಟಿಯಾಗುತ್ತಿವೆ. ಇವೆಲ್ಲವನ್ನು ಆಧಾರವಾಗಿ ಇಟ್ಟುಕೊಂಡು ಅದೆಷ್ಟೋ ಜನ ಫಿಟ್ನೆಸ್ ಟ್ರೇನರ್​ಗಳು ತಿಂಗಳಿಗೆ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಇನ್ನೂ ಫಿಟ್ನೆಸ್ ಸೆಂಟರ್​ಗಳನ್ನು ಶುರು ಮಾಡಿರೋರು ವಾರ್ಷಿಕವಾಗಿ ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದ್ದಾರೆ.

ಫಿಟ್ನೆಸ್ ಇಂಡಸ್ಟ್ರೀಯಲ್ಲಿ ಉದ್ಯೋಗಾವಕಾಶ: ಫಿಟ್ನೆಸ್ ಇನ್ಸ್ ಟ್ರಕ್ಟರ್, ಸ್ಪೋರ್ಟ್ಸ್ ಇನ್ಸ್​ಟ್ರಕ್ಟರ್, ಏರೋಬಿಕ್ಸ್ ಇನ್ಸ್​ಟ್ರಕ್ಟರ್, ಯೋಗ ಇನ್ಸ್​ಟ್ರಕ್ಟರ್, ಜುಂಬಾ ಇನ್ಸ್​ಟ್ರಕ್ಟರ್​ಗಳಿಗೆ ದೊಡ್ಡ ಹೋಟೆಲ್​ಗಳು, ಜಿಮ್ಳು, ಆರೋಗ್ಯ ಕ್ಲಬ್​ಗಳು, ಸ್ಪಾಗಳು, ಫಿಟ್ನೆಸ್ ಕೇಂದ್ರಗಳು, ಕಂಪನಿಗಳು, ಕ್ರೂಸ್ ಲೈನರ್​ಗಳು, ಪ್ರವಾಸಿ ರೆಸಾರ್ಟ್​ಗಳು ಹೀಗೆ ಹಲವೆಡೆ ಉದ್ಯೋಗಾವಕಾಶಗಳಿವೆ.

ವಿಜಯವಾಣಿ ಓದುಗರಿಗೆ ಶೇ.50 ಡಿಸ್ಕೌಂಟ್: ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ. VIJAYAVANI ಎಂದು ರೆಫರಲ್ ಕೋಡ್ ಬಳಸಿ, ಶೇ.50 ಡಿಸ್ಕೌಂಟ್ ಪಡೆಯಿರಿ.

ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿ ಫಿಟ್ನೆಸ್ ಕೋರ್ಸ್

ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಅಂತೆಯೆ ಫಿಟ್ನೆಸ್ ಟ್ರೇನರ್​ಗಳು ಕೂಡ ನಮ್ಮ ಆರೋಗ್ಯದ ಪಾಲಿನ ದೇವತಾ ಮನುಷ್ಯರಾಗಬಹುದು. ಹಾಗಾದ್ರೆ ಒಬ್ಬ ಯಶಸ್ವಿ ಫಿಟ್ನೆಸ್ ಟ್ರೇನರ್ ಆಗಲು ಬೇಕಾಗುವ ಅರ್ಹತೆ, ಸರ್ಟಿಫಿಕೇಟ್​ಗಳಾವುವು? ಎಷ್ಟು ಹಣ ಖರ್ಚು ಮಾಡಬೇಕಾಗುತ್ತೆ, ಏನೆಲ್ಲ ವೃತ್ತಿ ಅವಕಾಶಗಳಿವೆ? ಸ್ವಂತ ಫಿಟ್ನೆಸ್ ಸೆಂಟರ್ ತೆರೆಯೋ ಬಗೆ ಹೇಗೆ? ಇವೆಲ್ಲದರ ಕುರಿತ ಪೂರ್ಣ ಪ್ರಮಾಣದ ಮಾಹಿತಿ ನಿಮಗಾಗಿ ಇಂಡಿಯನ್ ಮನಿ ಡಾಟ್ ಕಾಮ್ ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿರುವ ಫಿಟ್ನೆಸ್ ಟ್ರೇನರ್ ಆಗಿ ಹೆಚ್ಚು ಸಂಪಾದಿಸೋದು ಹೇಗೆ ಎಂಬ ಕೋರ್ಸ್​ನಲ್ಲಿ ಲಭ್ಯ. ಯೋಗಾಭ್ಯಾಸ, ಏರೋಬಿಕ್ಸ್, ಜಿಮ್ ಈ ರೀತಿಯಾದಂತಹ ಹಲವಾರು ದೈಹಿಕ ವ್ಯಾಯಾಮಗಳ ಟ್ರೇನರ್​ಗಳು ಈ ಕೋರ್ಸ್​ನಲ್ಲಿ ಆಯಾ ಕ್ಷೇತ್ರದಲ್ಲಿ ಟ್ರೇನರ್ ಆಗಿ ಯಶಸ್ಸು ಕಾಣೋದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಇನ್ನೇಕೆ ತಡ ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ ಫಿಟ್ನೆಸ್ ಟ್ರೇನರ್ ಆಗಿ ಹೆಚ್ಚೆಚ್ಚು ಸಂಪಾದಿಸೋಕೆ ಶುರು ಮಾಡಿ

ಕೋರ್ಸ್​ನಲ್ಲಿ ಏನಿದೆ?

1. ಕೋರ್ಸ್ ಪರಿಚಯ 2. ಮಾರ್ಗದರ್ಶಕರ ಪರಿಚಯ 3. ಫಿಟ್ನೆಸ್ ಟ್ರೇನರ್- ಮಹತ್ವ 4. ಅರ್ಹತೆ 5. ಸರ್ಟಿಫಿಕೇಷನ್ಸ್ 6. ಸರ್ಟಿಫೈಡ್ ಟ್ರೇನರ್ ಆಗಲು ಎಷ್ಟು ಹಣ ಬೇಕು? 7. ಫಿಟ್ನೆಸ್ ಟ್ರೇನರ್ ಆಗಲು ಯಾವಾಗ ನಿರ್ಧರಿಸಬೇಕು? 8. ವೃತ್ತಿ ಅವಕಾಶಗಳು 9. ಫಿಟ್ನೆಸ್ ಟ್ರೇನರ್- ನೇಮಕಾತಿ 10. ಸರ್ಕಾರದ ಸವಲತ್ತುಗಳು 11. ಫಿಟ್ನೆಸ್ ಟ್ರೇನರ್ - ಆದಾಯ 12. ಫಿಟ್ನೆಸ್ ಟ್ರೇನರ್ - ಬ್ರಾ್ಯಂಡಿಂಗ್ 13. ನಿಮದೇ ಫಿಟ್ನೆಸ್ ಸೆಂಟರ್ ಆರಂಭಿಸೋದು ಹೇಗೆ?

ಮಾರ್ಗದರ್ಶಕರ ಪರಿಚಯ

  • ವನಿತಾ ಅಶೋಕ್- ಫಿಟ್ ಇಂಡಿಯಾ ರಾಯಭಾರಿ
  • ಅಮರೇಶ್- ಯೋಗ ಟ್ರೇನರ್
  • ಅರುಣ್ ಗೌಡ- ಜಿಮ್ ಟ್ರೇನರ್
  • ಕಿಶನ್- ಜಿಮ್ ಟ್ರೇನರ್
  • ವೀಣಾ ಭಟ್ - ಜುಂಬಾ ಟ್ರೇನರ್

ಇತರ ಆಯ್ಕೆಗಳು

1. ಪರ್ಸನಲ್ ಟ್ರೇನರ್: ಸಾಮಾನ್ಯವಾಗಿ ಹಲವಾರು ಸೆಲೆಬ್ರಿಟಿಗಳು ತಮ್ಮದೇ ಸ್ಥಳದಲ್ಲಿ ತರಬೇತಿ ಪಡೆಯಲು ಬಯಸುತ್ತಾರೆ. ಕ್ಲೈಂಟ್​ಗಳ ನಿರ್ದಿಷ್ಟ ಆರೋಗ್ಯ ಮತ್ತು ಫಿಟ್ನೆಸ್ ಅವಶ್ಯಕತೆಗೆ ತಕ್ಕಂತೆ ಟ್ರೇನ್ ಮಾಡುವುದರಿಂದ ಸಾಕಷ್ಟು ಹಣ ಗಳಿಸಲು ಸಾಧ್ಯ.

2. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ : ಯೋಗದಲ್ಲಿ ತರಬೇತಿ ಹೊಂದಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರನ್ನು ಆಸ್ಪತ್ರೆಗಳು, ಶಾಲಾ-ಕಾಲೇಜು ಮತ್ತು ಇನ್ನಿತರ ಕಂಪನಿಗಳು ಸಲಹೆಗಾರರಾಗಿ ಅಥವಾ ಬೋಧಕರಾಗಿ ನೇಮಿಸಿಕೊಳ್ಳುತ್ತವೆ.

3. ಕ್ಲಿನಿಕಲ್ ವ್ಯಾಯಾಮ ತಜ್ಞ : ಸಾಮಾನ್ಯವಾಗಿ ಆಸ್ಪತ್ರೆಗಳು, ಪುನರ್ವಸತಿ ಕೇಂದ್ರಗಳು ಮತ್ತು ಎನ್​ಜಿಒಗಳಲ್ಲಿ ಕ್ಲಿನಿಕಲ್ ವ್ಯಾಯಾಮ ತಜ್ಞರಿಗೆ ಸದ್ಯ ಸಾಕಷ್ಟು ಬೇಡಿಕೆ ಇದೆ. ರೋಗಿಗಳ ಚೇತರಿಕೆ ಸಹಾಯ ಮಾಡುವ ಇವರಿಗೆ ತಿಂಗಳಿಗೆ ಲಕ್ಷಾಂತರ ಹಣ ಸಂಪಾದಿಸಲು ಅವಕಾಶ ಇದೆ.

4. ಫಿಟ್ನೆಸ್ ಮಾಡೆಲ್: ಅಥ್ಲೆಟಿಕ್ ಬಟ್ಟೆಗಳನ್ನು ತಯಾರಿಸುವ ಕಂಪನಿಗಳು, ಫಿಟ್ನೆಸ್​ಗೆ ಸಂಬಂಧಿಸಿದ ಜಾಹೀರಾತು ಮತ್ತು ಕ್ಯಾಟ್​ಲಾಗ್​ಗಳಿಗಾಗಿ ಫಿಟ್ನೆಸ್ ಮಾಡೆಲ್​ಗಳನ್ನು ನೇಮಿಸಿಕೊಳ್ಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net