ಎರಡು ತಿಂಗಳ ಹಸುಗೂಸಿಗೆ ಒಂದೇ ಬಾರಿ ನಾಲ್ಕು ಡೋಸ್​ ಲಸಿಕೆ ನೀಡಿದ ನರ್ಸ್..? ನಡೆದದ್ದು ಮಾತ್ರ ದುರಂತ

child
ಸಾಂದಭಿರ್ಕ ಚಿತ್ರ
Published on

ಸೋನೆಪುರ್: ನರ್ಸ್​ವೊಬ್ಬಳು ಒಂದೇ ಬಾರಿಗೆ ನಾಲ್ಕು ಡೋಸ್​ ಲಸಿಕೆ ನೀಡಿದ್ದಾಳೆ ಎಂದು ಆರೋಪಿಸಿರುವ ಘಟನೆ ಒಡಿಶಾದ ಸೋನೆಪುರ್​ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಮೂವರ ಸಾವು

ಧನಬಸ ಗ್ರಾಮದಲ್ಲಿ ವಾಸವಾಗಿರುವ ನರೇಂದ್ರ ಸಂಧ್ ಮತ್ತು ಪ್ರಮೋದಿನಿ ಎಂಬ ದಂಪತಿಗಳು ತಮ್ಮ ಎರಡು ತಿಂಗಳು ಶಿಶುವನ್ನು ಲಸಿಕೆಗಾಗಿ ಜಿಬಂದದಾರ್ ಅಂಗನವಾಡಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ, ಈ ವೇಳೆ ಅಲ್ಲಿನ ಸಹಾಯಕ ನರ್ಸ್​ವೊಬ್ಬಳು ಆ ಮಗುವಿಗೆ ಒಂದೇ ಬಾರಿಗೆ ನಾಲ್ಕು ಡೋಸ್​​ ಲಸಿಕೆಯನ್ನು ನೀಡಿದ್ದಾರೆ.

ಆದರೆ, ಮನೆ ತಲುಪಿದ ಬಳಿಕ ಮಗು ಪ್ರಜ್ಞೆ ತಪ್ಪಿದ್ದು, ಕೂಡಲೇ ಗಾಬರಿಯಾಗದ ದಂಪತಿಗಳು ಹಸುಗೂಸನ್ನು ಸಮೀಪದ ಬರ್ಪಾಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಈ ವೇಳೆಗಾಗಲೇ ಮಗು ಮೃತಪಟ್ಟಿದ್ದು, ಲಸಿಕೆಯ ಮಿತಿಮೀರಿದ ಡೋಸ್​​ ಮತ್ತು ಅಂಗನವಾಡಿ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ತನ್ನ ಶಿಶು ಪ್ರಾಣ ಬಿಟ್ಟಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಎಸ್​​.ರಾಂಪುರ ಪೊಲೀಸ್​​ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net