ನವದೆಹಲಿ: ದೇಶಾದ್ಯಂತ ಇಂದು (ಅ.05) ಇಂಡಿಗೋ ಏರ್ಲೈನ್ಸ್ನ ಸರ್ವರ್ನಲ್ಲಿ ಸಮಸ್ಯೆ ಉಂಟಾಗಿದ್ದು ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿಯು ಇದೇ ಚಿತ್ರಣವಿದ್ದು ಪ್ರಯಾಣಿಕರು ಪರದಾಡಿದ್ದಾರೆ.
ಸಿಸ್ಟಂ ಸ್ಲೋಡೌನ್ ಆದ ಕಾರಣ ಇದು ತನ್ನ ವೆಬ್‌ಸೈಟ್ ಮತ್ತು ಬುಕಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಗ್ರಾಹಕರು ನಿಧಾನಗತಿಯ ಚೆಕ್-ಇನ್‌ಗಳು ಮತ್ತು ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳನ್ನು ಒಳಗೊಂಡಂತೆ ಹೆಚ್ಚು ಹೊತ್ತು ಕಾಯಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಇಂದು ಬೆಳಿಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಎದುರಾಗಿದ್ದು. ಚೆಕ್ ಇನ್ ಸಮಸ್ಯೆಯಿಂದಾಗಿ ವಿಮಾನಗಳು ಟೇಕ್ ಆಫ್ ಆಗಲು ಸಹ ವಿಳಂಬ ಮಾಡಿದವು. ಸಮಯಕ್ಕೆ ಸರಿಯಾಗಿ ಪ್ರಯಾಣ ಮಾಡಲಾಗದೆ ಪ್ರಯಾಣಿಕರು ಪರದಾಟ ಮಾಡಿದರು.
“ನಾವು ಪ್ರಸ್ತುತ ನಮ್ಮ ನೆಟ್‌ವರ್ಕ್‌ನಾದ್ಯಂತ ತಾತ್ಕಾಲಿಕ ಸಿಸ್ಟಮ್ ನಿಧಾನಗತಿಯನ್ನು ಅನುಭವಿಸುತ್ತಿದ್ದೇವೆ. ಇದು ನಮ್ಮ ವೆಬ್‌ಸೈಟ್ ಮತ್ತು ಬುಕಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ನಿಧಾನಗತಿಯ ಚೆಕ್-ಇನ್‌ಗಳು ಮತ್ತು ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳನ್ನು ಒಳಗೊಂಡಂತೆ ಗ್ರಾಹಕರು ಹೆಚ್ಚಿನ ಕಾಯುವ ಸಮಯವನ್ನು ಎದುರಿಸಬೇಕಾಗುತ್ತದೆ, ”ಎಂದು ಇಂಡಿಗೋ ಸಲಹೆಯಲ್ಲಿ ತಿಳಿಸಿದೆ.
#6ETravelAdvisory : We are currently experiencing a temporary system slowdown across our network, affecting our website and booking system. As a result, customers may face increased wait times, including slower check-ins and longer queues at the airport. (1/3)
— IndiGo (@IndiGo6E) October 5, 2024
“ನಮ್ಮ ವಿಮಾನ ನಿಲ್ದಾಣದ ತಂಡವು ಎಲ್ಲರಿಗೂ ಸಹಾಯ ಮಾಡಲು ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಸಮರ್ಪಿತವಾಗಿದೆ. ಸಾಧ್ಯವಾದಷ್ಟು ಬೇಗ ಸ್ಥಿರತೆ ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ಈ ಸಮಯದಲ್ಲಿ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಮತ್ತು ಈ ಸಮಯದಲ್ಲಿ ನಿಮ್ಮ ತಾಳ್ಮೆಯನ್ನು ಪ್ರಶಂಸಿಸುತ್ತೇವೆ, ”ಎಂದು ಇಂಡಿಗೋ ಹೇಳಿದೆ. ಇಂಡಿಗೋ ದಿನಕ್ಕೆ ಅಂತರರಾಷ್ಟ್ರೀಯ ಸೇರಿದಂತೆ 2,000 ವಿಮಾನಗಳನ್ನು ನಿರ್ವಹಿಸುತ್ತದೆ.
ಕೆಲ ವಾರಗಳ ಹಿಂದೆ ಮೈಕ್ರೋಸಾಫ್ಟ ಸರ್ವರ್ಗಳಲ್ಲು ಇಂತಹ ಸಮಸ್ಯೆ ಕಾಣಿಸಿಕೊಂಡು ಇಡೀ ವಿಶ್ವದಾದ್ಯಂತ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
Maharashtra | ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರ ಗುಂಪು ನಡೆಸುತ್ತಿದೆ: ಪ್ರಧಾನಿ ಮೋದಿ ಆರೋಪ