ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ವಿಮಾನ ಹಾರಾಟ ಆರಂಭ

mng--10 Aug Airport
Published on

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಗೆ ಇಂಡಿಗೋ ವಿಮಾನ ಹಾರಾಟ ಆರಂಭಗೊಂಡಿದೆ.


ಮೊದಲ ಹಾರಾಟದ ವಿಮಾನದಲ್ಲಿ ತನ್ನ ತಾಯಿಯೊಂದಿಗೆ ಚೆಕ್-ಇನ್ ಮಾಡಿದ ಮೊದಲ ಫ್ಲೈಯರ್ ನಂದಿಕಾ ವಿ. ವಿಮಾನ ನಿಲ್ದಾಣ ಮತ್ತು ಏರ್‌ಲೈನ್ ತಂಡದೊಂದಿಗೆ ಸಾಂಪ್ರದಾಯಿಕ ದೀಪವನ್ನು ಬೆಳಗಿಸುವ ಅವಕಾಶ ಪಡೆದರು, ಮೊದಲ ಬೋಡಿರ್ಂಗ್ ಪಾಸ್ ಮತ್ತು ಏರ್‌ಲೈನ್ ಬ್ಯಾಗ್ ಪಡೆದರು. ಕ್ಯಾಪ್ಟನ್ ವಿಕರ್ ಯಾಸೀನ್ ನೇತೃತ್ವದ ಪ್ಲೈಟ್ 6ಇ 1442 ಶುಕ್ರವಾರ ರಾತ್ರಿ 9.40ಕ್ಕೆ 180 ಪ್ರಯಾಣಿಕರೊಂದಿಗೆ ಪ್ರಯಾಣ ಬೆಳೆಸಿತು.


ಈಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಎರಡು ದೈನಂದಿನ ವಿಮಾನಗಳನ್ನು ಹೊಂದಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತೊಂದು ದೈನಂದಿನ ವಿಮಾನವನ್ನು ನಿರ್ವಹಿಸುತ್ತದೆ.


ಈ ಹೊಸ ವಿಮಾನದ ಪ್ರಾರಂಭವು ವಿಮಾನಯಾನ ಮತ್ತು ವಿಮಾನ ನಿಲ್ದಾಣ ಆಪರೇಟರ್ ನಡುವಿನ ನಿಕಟ ಕೆಲಸದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಇದು ಈ ಪ್ರದೇಶದ ಜನರಿಗೆ ಜಗತ್ತಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ಮತ್ತು ಆರು ದೇಶೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net