

India thrilling win :ಮುಂಬೈನಲ್ಲಿ ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆದ ಟಿ-20 5ನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸಿಡಿಸಿದ ಸ್ಫೋಟಕ ಶತಕ ನೆರವಿನಿಂದ ಟೀಮ್ ಇಂಡಿಯಾದ ರೋಚಕ ಗೆಲುವು ಕಾಣುವ ಮೂಲಕ 4-1 ಅಂತರಲ್ಲಿ ಟಿ-20 ಸರಣಿ ಕೈ ವಶ ಮಾಡಿಕೊಂಡಿತು.
ಪಂದ್ಯದಲ್ಲಿ ಅಭಿಷೇಕ್ ಅದ್ಭುತ ಪ್ರದರ್ಶನ ನೀಡಿದರು. ಕೇವಲ 54 ಎಸೆತಗಳಲ್ಲಿ 7 ಬೌಂಡರಿ 13 ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರೈಸುವುದರ ಜತೆಗೆ 135 ರನ್ ಗಳಿಸಿದರು. ಅಂತಾರಾಷ್ಟ್ರೀಯ ಟಿ-20ಯಲ್ಲಿ ಭಾರತ ಪರ ಅತಿವೇಗದ ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾಗಿದರು. 20 ಒವರ್ಗಳಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 247 ಬೃಹತ್ ರನ್ಗಳನ್ನು ಪೆರಿಸಿತು.
248 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಕೇವಲ 10.3 ಒವರ್ನಲ್ಲಿ ತನ್ನ ಎಲ್ಲಾ 10 ವಿಕೆಟ್ ಕಳೆದುಕೊಳ್ಳುವ ಮೂಲಕ 97 ರನ್ ಕಲೆ ಹಾಕಿ ಸೋಲಾನುಭವಿಸಬೇಕಾಯಿತು. ಭಾರತ 150 ರನ್ಗಳ ಗೆಲುವಿನ ನಗೆ ಬಿರಿತು. (ಏಜೆನ್ಸೀಸ್)