

ತೈಪೇಯಿ: ಚೀನಾ- ಭಾರತ ಗಡಿ ಸಂಘರ್ಷ ಜಾಗತಿಕವಾಗಿ ಗಮನಸೆಳೆದಿದ್ದು, ಚೀನಾ ಅಧೀನದ ಹಾಂಕಾಂಗ್ನ ಜನ ಈ ಸಂಘರ್ಷದ ಫಲಿತಾಂಶವನ್ನು ಎದುರುನೋಡುತ್ತಿದ್ದಾರೆ. ಈ ನಡುವೆ, ಹಾಂಕಾಂಗ್ನ ಸಾಮಾಜಿಕ ತಾಣದಲ್ಲಿ ಡ್ರ್ಯಾಗನ್ ಮೇಲೆ ಶ್ರೀರಾಮಚಂದ್ರ ದಾಳಿ ನಡೆಸುತ್ತಿರುವ ಕ್ಯಾರಿಕೇಚರ್ ಒಂದು ವೈರಲ್ ಆದರೆ, ತೈವಾನ್ ನ್ಯೂಸ್ ಪೋರ್ಟಲ್ ಅದನ್ನು ಫೋಟೋ ಆಫ್ ದ ಡೇ ಎಂದು ಪ್ರಕಟಿಸಿ ಗಮನಸೆಳೆಯಿತು.
ಲಡಾಕ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದ ಯೋಧರು ಚೀನಾ ಯೋಧರನ್ನು ಎದುರಿಸಿ ಹಿಮ್ಮೆಟ್ಟಿಸಿದ ಕ್ರಮದ ಬಗ್ಗೆ ಚೀನಾ ಅಧೀನದ ಹಾಂಕಾಂಗ್ನಲ್ಲೇ ಖುಷಿ, ಸಂಭ್ರಮ ವ್ಯಕ್ತವಾಗಿದೆ. ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದರೆ ಚೀನಾದ 43 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸುದ್ದಿ ಪ್ರಕಟವಾದ ಮಾರನೇ ದಿನ ಹಾಂಕಾಂಗ್ನ ಸಾಮಾಜಿಕ ಜಾಲತಾಣ LIHKG ನಲ್ಲಿ ವಿ ವಿಲ್ ಕಾಂಕರ್, ವಿ ಕಿಲ್ ಎಂಬ ಶೀರ್ಷಿಕೆಯ ಇಲ್ಲಸ್ಟ್ರೇಷನ್ ವೈರಲ್ ಆಗಿದೆ. ಇದರಲ್ಲಿ ಭಾರತದ ಭಗವಾನ್ ಶ್ರೀರಾಮಚಂದ್ರ ಚೀನಾದ ಸಂಕೇತವಾಗಿರುವ ಡ್ರ್ಯಾಗನ್ ಅನ್ನು ಬಾಣ ಹೂಡಿ ಮಣಿಸುವ ದೃಶ್ಯವಿದೆ.
ಇದನ್ನೂ ಓದಿ: ಪಾಕಿಗಳಿಗಿಂತ ಅನಕ್ಷರಸ್ಥರಿಲ್ಲ- ಪಾಕ್ ಸಚಿವೆಯ ಆಕ್ರೋಶ
ಹಾಂಕಾಂಗ್ನ ಟ್ವಿಟರ್ ಬಳಕೆದಾರ ಹೊಸೈಲೀ ಇದನ್ನು ಶೇರ್ ಮಾಡಿಕೊಂಡಿದ್ದು, ಸಿನೋ-ಇಂಡಿಯನ್ ವಾರ್ ಬಗ್ಗೆ ಭಾರತೀಯ ಗೆಳೆಯನೊಬ್ಬ ಬಿಡಿಸಿರುವ ಪೋಸ್ಟರ್ ಇದಾಗಿದ್ದು ವೈರಲ್ ಆಗಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಭಾರತವನ್ನು ಹಾಂಕಾಂಗ್ ಜನ ಬೆಂಬಲಿಸುತ್ತಾರೆ ಎಂಬುದನ್ನು ಅಲ್ಲಿನ ಸಾಮಾಜಿಕ ತಾಣದಲ್ಲಿ ಭಾರಿ ಪ್ರಮಾಣದಲ್ಲಿ ವ್ಯಕ್ತವಾಗಿದೆ ಎಂದೂ ತೈವಾನ್ ನ್ಯೂಸ್ ವರದಿ ಮಾಡಿದೆ. (ಏಜೆನ್ಸೀಸ್)