ಇಂಡೋನೇಷ್ಯಾ ಮಾಸ್ಟರ್ಸ್‌ -100 ಬ್ಯಾಡ್ಮಿಂಟನ್ ಟೂರ್ನಿ ಗೆದ್ದ ಕಿರಣ್ ಜಾರ್ಜ್

New-Project-11-1
Published on

ಮೆಡಾನ್ (ಇಂಡೋನೇಷ್ಯಾ): ಭಾರತದ ಉದಯೋನ್ಮುಖ ಷಟ್ಲರ್ ಕಿರಣ್ ಜಾರ್ಜ್ ಇಂಡೋನೇಷ್ಯಾ ಮಾಸ್ಟರ್ಸ್‌ -100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜಪಾನ್‌ನ ಕೊ ತಕಹಾಶಿ ಅವರನ್ನು ನೇರ ಗೇಮ್‌ಗಳಿಂದ ಮಣಿಸಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಇದು ಅವರಿಗೆ ಎರಡನೇ ಬಿಡಬ್ಲುೃಎ್ ವರ್ಲ್ಡ್ ಟೂರ್ ಸೂಪರ್-100 ಪ್ರಶಸ್ತಿ ಎನಿಸಿದೆ.

ಭಾನುವಾರ ನಡೆದ ೈನಲ್‌ನಲ್ಲಿ 23 ವರ್ಷದ ಕಿರಣ್ ಜಾರ್ಜ್ 21-19, 22-20 ಗೇಮ್‌ಗಳಿಂದ ವಿಶ್ವ ನಂ.82 ತಕಹಾಶಿ ಅವರನ್ನು ಮಣಿಸಿದರು. 56 ನಿಮಿಷಗಳ ಕಠಿಣ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಕಿರಣ್ ಜಾರ್ಜ್ ಬಿಡಬ್ಲುೃಎ್ ಪುರುಷರ ರ‌್ಯಾಂಕಿಂಗ್‌ನಲ್ಲಿ 50ನೇ ಸ್ಥಾನ ಪಡೆದುಕೊಂಡಿದ್ದಾರೆ. 2022ರಲ್ಲಿ ಓಡಿಶಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿರುವ ಕೇರಳ ಷಟ್ಲರ್ ಕಿರಣ್ ಜಾರ್ಜ್, ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ಇದೊಂದು ಅತ್ಯುತ್ತಮ ಗೆಲುವು. ಆದ್ದರಿಂದ ನಾನು ಅಪಾರ ಸಂತಸಗೊಂಡಿದ್ದೇನೆ. ಕಿರಣ್ ಹಾಗೂ ಮಿಥುನ್ ಮಂಜುನಾಥ್ ಮುಂದಿನ ದಿನಗಳಲ್ಲಿ ಭಾರತದ ಪ್ರಮುಖ ಆಟಗಾರರಾಗಲಿದ್ದಾರೆ. ಈ ನಿಟ್ಟಿನಲ್ಲಿ ಇಬ್ಬರೂ ಆಟಗಾರರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ನಿರ್ದೇಶಕ ವಿಮಲ್ ಕುಮಾರ್ ತಿಳಿಸಿದ್ದಾರೆ. ಕಿರಣ್ ಇನ್ನು ಮಂಗಳವಾರ ಆರಂಭವಾಗಲಿರುವ ಹಾಂಕಾಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net