

ಕೊಲಂಬೊ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್ ಏಕದಿನ ಟೂರ್ನಿಯ ಸೂಪರ್-4 ಹಂತದಲ್ಲಿ ಭಾನುವಾರ ಮರುಮುಖಾಮುಖಿ ಆಗಲಿವೆ. ಲೀಗ್ ಸೆಣಸಾಟಕ್ಕೆ ವರುಣನ ಅಡ್ಡಿಯಿಂದ ನಿರಾಸೆ ಅನುಭವಿಸಿದ್ದ ಅಭಿಮಾನಿಗಳು ಈ ಬಾರಿ ಹೈ-ವೋಲ್ಟೇಜ್ ಕದನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಪಂದ್ಯಕ್ಕೆ ಮತ್ತೆ ಮಳೆ ಭೀತಿ ಕಾಡುತ್ತಿದ್ದು, ಸ್ಪಷ್ಟ ಲಿತಾಂಶಕ್ಕೆ ಸೋಮವಾರ ಮೀಸಲು ದಿನವನ್ನೂ ನಿಗದಿಪಡಿಸಲಾಗಿದೆ.
ಲೀಗ್ ಹಂತದ ಎರಡು ಪಂದ್ಯಗಳಿಗೆ ಮಳೆ ಅಡ್ಡಿಪಡ್ಡಿಸಿದ್ದರಿಂದ ಟೀಮ್ ಇಂಡಿಯಾದ ಸಂಪೂರ್ಣ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಸಿಗದಂತಾಗಿದೆ. ವಿಶ್ವಕಪ್ ತಯಾರಿಗೆ ಉತ್ತಮ ವೇದಿಕೆ ಎನಿಸಿರುವ ಟೂರ್ನಿಯಲ್ಲಿ ಭಾರತ ತನ್ನ 11ರ ಬಳಗವನ್ನು ಅಂತಿಮಗೊಳಿಸುವ ಸನಿಹಲದಲ್ಲಿದೆ. ಸತತ ಪ್ರಯೋಗಗಳಿಂದ ವೈಲ್ಯ ಕಂಡಿರುವ ಮಧ್ಯಮ ಕ್ರಮಾಂಕಕ್ಕೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಆಗಮನ ಬಲ ತುಂಬುವುದರ ಜತೆಗೆ ತಲೆನೋವು ಆಗಿಯೂ ಪರಿಣಮಿಸಿದೆ. ಮೊದಲ ಮುಖಾಮುಖಿಯಲ್ಲಿ ಪಾಕ್‌ನ ತ್ರಿವಳಿ ವೇಗದ ಬೌಲರ್‌ಗಳ ಎದುರು ಲಯ ಕಂಡುಕೊಳ್ಳಲು ವಿಲವಾಗಿದ್ದ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಈ ಬಾರಿಯಾದರೂ ದಿಟ್ಟ ತಿರುಗೇಟು ನೀಡುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
ಇನ್ನು ಪಾಕ್ ತಂಡ ಬಾಂಗ್ಲಾದೇಶ ಎದುರು ಭರ್ಜರಿ ಗೆಲುವಿನೊಂದಿಗೆ ಸೂಪರ್-4ರಲ್ಲಿ ಈಗಾಗಲೆ ಶುಭಾರಂಭ ಕಂಡಿದೆ. ಇನ್ನೊಂದು ಗೆಲುವು ತಂಡಕ್ಕೆ ೈನಲ್ ಹಾದಿ ಸುಗಮಗೊಳಿಸಲಿದೆ. ಈ ಪಂದ್ಯ ಮತ್ತೊಮ್ಮೆ ಭಾರತದ ಬ್ಯಾಟಿಂಗ್ ಮತ್ತು ಪಾಕ್ ಬೌಲಿಂಗ್ ನಡುವಿನ ಸಮರ ಎನಿಸಲಿದೆ.
ರಾಹುಲ್- ಕಿಶನ್-ಶ್ರೇಯಸ್ ತ್ರಿಕೋನ ಸ್ಪರ್ಧೆ: ಕನ್ನಡಿಗ ಕೆಎಲ್ ರಾಹುಲ್ ನಾಲ್ಕು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಮರಳಲು ಸಜ್ಜಾಗಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅವರು ವಿಶ್ವಕಪ್ ಹಾಗೂ ಏಷ್ಯಾಕಪ್ ಟೂರ್ನಿಗೆ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಯ್ಕೆಗಾರರ ಭರವಸೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಹುಲ್ ಪಾಲಿಗೆ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಜತೆಗೆ ಅವರು ಫಿಟ್ನೆಸ್ ಕೂಡ ಸಾಬೀತುಪಡಿಸಬೇಕಾಗಿದೆ. ರಾಹುಲ್ ಸ್ಥಾನ ಪಡೆದರೆ, ಶ್ರೇಯಸ್ ಅಯ್ಯರ್ ಅಥವಾ ಇಶಾನ್ ಕಿಶನ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಪರಿಸ್ಥಿತಿಗೆ ತಕ್ಕಂತೆ ರಾಹುಲ್ ಹಾಗೂ ಇಶಾನ್ ಕಿಶನ್ ಇಬ್ಬರನ್ನೂ ಆಡಿಸುವ ಬಗ್ಗೆ ರೋಹಿತ್ ಶರ್ಮ ಈಗಾಗಲೆ ಸುಳಿವು ನೀಡಿದ್ದಾರೆ. 2019ರಿಂದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿರುವ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಆಡಿರುವ ಒಟ್ಟು 18 ಪಂದ್ಯಗಳಲ್ಲಿ 742 ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಅರ್ಧಶತಕ, ಒಂದು ಶತಕ ಸೇರಿದೆ. ಜತೆಗೆ ಈ ಪಂದ್ಯದಲ್ಲಿ ರಾಹುಲ್-ನಸೀಮ್ ಷಾ ಮುಖಾಮುಖಿಯೂ ಕುತೂಹಲ ಕೆರಳಿಸಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ರಾಹುಲ್, ನಸೀಮ್ ಷಾಗೆ ವಿಕೆಟ್ ಒಪ್ಪಿಸಿದ್ದರು.
ಮತ್ತೆ ಕಾಡುತ್ತಿದೆ ಮಳೆ ಭೀತಿ: ಸೂಪರ್-4 ಪಂದ್ಯಗಳು ಕೊಲಂಬೊದ ಆರ್. ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಶನಿವಾರ ಶ್ರೀಲಂಕಾ-ಬಾಂಗ್ಲಾ ನಡುವಿನ ಪಂದ್ಯ ಮಳೆ ಅಡಚಣೆ ಎದುರಿಸಿಲ್ಲ. ಲಂಕಾದ ರಾಜಧಾನಿಯಲ್ಲಿ ಕಳೆದ 2 ದಿನಗಳಿಂದ ಬಿಸಿಲಿನ ವಾತಾವರಣವಿದೆ. ಆದರೂ, ಈ ಹೈವೋಲ್ಟೇಜ್ ಪಂದ್ಯ ಮಳೆ ಭೀತಿಯಿಂದ ಮುಕ್ತವಾಗಿಲ್ಲ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಪಂದ್ಯಕ್ಕೆ ಮಳೆ ಕಾಡುವ ಸಾಧ್ಯತೆ ಶೇ. 90ರಷ್ಟಿದೆ. ಹೀಗಾಗಿಯೇ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಲಾಗಿದೆ.
ಟೀಮ್ ನ್ಯೂಸ್:
ಭಾರತ: ಕೆಎಲ್ ರಾಹುಲ್, ಜಸ್‌ಪ್ರೀತ್ ಬುಮ್ರಾ ಲಭ್ಯರಾಗಿರುವುದರಿಂದ ಬ್ಯಾಟಿಂಗ್-ಬೌಲಿಂಗ್ ವಿಭಾಗದಲ್ಲಿ ಈ ಬಾರಿ ಬದಲಾವಣೆ ನಿಶ್ಚಿತವೆನಿಸಿದೆ. ಆದರೆ, ಇಬ್ಬರಿಗೂ ಯಾರು ಸ್ಥಾನ ಬಿಟ್ಟುಕೊಡಲಿದ್ದಾರೆ ಎಂಬುದು ಖಚಿತವಾಗಿಲ್ಲ. ರಾಹುಲ್‌ಗೆ ಇಶಾನ್ ಕಿಶನ್ ಅಥವಾ ಶ್ರೇಯಸ್ ಅಯ್ಯರ್ ಸ್ಥಾನ ಬಿಟ್ಟುಕೊಡಲಿದ್ದರೆ, ಬುಮ್ರಾಗೆ ಸಿರಾಜ್ ಅಥವಾ ಶಾರ್ದೂಲ್ ಠಾಕೂರ್ ಸ್ಥಾನ ಬಿಟ್ಟುಕೊಡುವ ಸಾಧ್ಯತೆಗಳಿವೆ.
ಪಾಕಿಸ್ತಾನ: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯದ ಆತಂಕ ಎದುರಿಸಿದ್ದ ವೇಗಿ ನಸೀಮ್ ಷಾ, ಭಾರತ ವಿರುದ್ಧ ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆ ಇದೆ. ಬಾಂಗ್ಲಾ ತಂಡದಲ್ಲಿ ಎಡಗೈ ಬೌಲರ್‌ಗಳು ಹೆಚ್ಚಿರುವ ಕಾರಣಕ್ಕೆ ಹೊರಗುಳಿದಿದ್ದ ಎಡಗೈ ಬ್ಯಾಟರ್ ಮೊಹಮದ್ ನವಾಜ್, ಭಾರತ ವಿರುದ್ಧ ಪಂದ್ಯಕ್ಕೆ ಹೀಮ್ ಅಶ್ರ್ ಬದಲಿಗೆ ತಂಡಕ್ಕೆ ಮರಳಬಹುದು.
ಆರಂಭ: ಮಧ್ಯಾಹ್ನ 3.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್