ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಫೈನಲ್ ಲಗ್ಗೆ ಇಟ್ಟು ಚಿನ್ನದ ಪದಕದ ಮೇಲೆ ನಿರೀಕ್ಷೆ ಮೂಡಿಸಿದ್ದ ಕುಸ್ತಿಪಟು ವಿನೇಶ್ ಪೋಗಟ್, ತೂಕದ ಕಾರಣದಿಂದ ಒಲಿಂಪಿಕ್ಸ್ನಿಂದ ಅನರ್ಹಗೊಳ್ಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.
Indian Wrestler Vinesh Phogat disqualified from the Women’s Wrestling 50kg for being overweight.
It is with regret that the Indian contingent shares news of the disqualification of Vinesh Phogat from the Women’s Wrestling 50kg class. Despite the best efforts by the team through… pic.twitter.com/xYrhzA1A2U
— ANI (@ANI) August 7, 2024
ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆ ಅಡಿಯಲ್ಲಿ ವಿನೇಶ್ ಸ್ಫರ್ಧಿಸಿದ್ದರು. ಇಂದು ರಾತ್ರಿ ಫೈನಲ್ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಬೆಳಿಗ್ಗೆ ವಿನೇಶ್ ಅವರ ದೇಹದ ತೂಕವನ್ನು ಪರೀಕ್ಷಿಸುವ ಸಂದರ್ಭದಲ್ಲಿ ನಿಗದಿತ ತೂಕಕ್ಕಿಂತ 150 ಗ್ರಾಂ ತೂಕ ಹೆಚ್ಚಿರುವುದು ಕಂಡುಬಂದಿದೆ. ಈ ಕಾರಣದಿಂದ ಒಲಿಂಪಿಕ್ಸ್ನಿಂದ ವಿನೇಶ್ ಅನರ್ಹಗೊಂಡಿದ್ದಾರೆ.
ಒಲಿಂಪಿಕ್ಸ್ ನಿಯಮದ ಪ್ರಕಾರ ತೂಕವನ್ನು ನಿರ್ವಹಿಸಲು ಸಾಧ್ಯವಾಗದ ಯಾವುದೇ ಕುಸ್ತಿಪಟುವನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸಲಾಗುತ್ತದೆ ಮತ್ತು ಅವರಿಗೆ ಕೊನೆಯ ಸ್ಥಾನ ನೀಡಲಾಗುತ್ತದೆ. ಹೀಗಾಗಿ ವಿನೇಶ್ ಪೋಗಟ್ ಅವರು ಅನರ್ಹಗೊಂಡಿದ್ದು, ಬೆಳ್ಳಿ ಪದಕವೂ ಕೂಡ ಸಿಗುವುದಿಲ್ಲ.
ಈ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಸಿ) ಹೇಳಿಕೆ ನೀಡಿದ್ದು, ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಕುಸ್ತಿಪಟು ವಿನೇಶ್ ಪೋಗಟ್ ಅವರನ್ನು ಅನರ್ಹಗೊಳಿಸಿರುವ ಸುದ್ದಿಯನ್ನು ವಿಷಾದದಿಂದ ಹಂಚಿಕೊಳ್ಳುತ್ತೇವೆ. ರಾತ್ರಿಯಿಡೀ ಭಾರತ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಂದು ಬೆಳಿಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ತೂಕವನ್ನು ವಿನೇಶ್ ಹೆಚ್ಚಿಗೆ ಹೊಂದಿದ್ದರು. ಸದ್ಯ ಈ ಬಗ್ಗೆ ಹೆಚ್ಚಿಗೆ ಏನು ಹೇಳಲಾಗುವುದಿಲ್ಲ. ಭಾರತ ತಂಡವು ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ವಿನಂತಿಸುತ್ತದೆ. ಸದ್ಯ ಕೈಯಲ್ಲಿರುವ ಇತರೆ ಸ್ಪರ್ಧೆಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತದೆ ಎಂದು ಐಒಸಿ ಹೇಳಿದೆ.
ಒಲಿಂಪಿಕ್ಸ್ ನಿಯಮಗಳ ಪ್ರಕಾರ ವಿನೇಶ್ ಪೋಗಟ್ ಅನರ್ಹಗೊಂಡಿದ್ದರಿಂದ ಚಿನ್ನ ಮತ್ತು ಕಂಚಿನ ಪದಕ ಮಾತ್ರ ವಿತರಣೆಯಾಗಲಿದೆ. ಬೆಳ್ಳಿ ಪದಕ ಲಭ್ಯವಾಗುವುದಿಲ್ಲ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ವಿರುದ್ಧ ಫೈನಲ್ನಲ್ಲಿ ಸೆಣಸಾಡಬೇಕಿತ್ತು. ಆದರೆ, ಅನರ್ಹಗೊಂಡಿರುವುದು ಭಾರತೀಯರಿಗೆ ಆಘಾತ ಉಂಟುಮಾಡಿದೆ. ಹರಿಯಾಣದ 29 ವರ್ಷದ ವಿನೇಶ್ ಪೋಗಟ್ ಮಂಗಳವಾರ (ಆ.6) ರಾತ್ರಿ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಈ ಮುನ್ನ 2016ರ ರಿಯೋ ಒಲಿಂಪಿಕ್ಸ್ನಲ್ಲಿ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದ ವಿನೇಶ್, ಕ್ವಾರ್ಟರ್ಫೈನಲ್ನಲ್ಲಿ ಗಾಯಕ್ಕೆ ತುತ್ತಾಗಿ ಪಂದ್ಯವನ್ನು ಅರ್ಧಕ್ಕೆ ತ್ಯಜಿಸಿದ್ದರು. 2021ರ ಟೋಕಿಯೊ ಗೇಮ್ಸ್ನಲ್ಲಿ 53 ಕೆಜಿ ವಿಭಾಗದಲ್ಲಿ ಆಡಿದಾಗಲೂ ಎಂಟರ ಘಟ್ಟದಲ್ಲಿ ವಿನೇಶ್ ಪದಕದ ಕಸನು ಭಗ್ನಗೊಂಡಿತು. (ಏಜೆನ್ಸೀಸ್)
ಪ್ರೀತಿಯ ವೈರಿಗಳೇ ತಾಳ್ಮೆ ಇರಲಿ…ಕುಸ್ತಿಯಲ್ಲಿ ಫೈನಲ್ಗೆ ಲಗ್ಗೆಯಿಟ್ಟ ಬೆನ್ನಲ್ಲೇ ವಿನೇಶ್ ಹಳೆಯ ಪೋಸ್ಟ್ ವೈರಲ್