More

    ನಿರ್ಮಾಣ ಹಂತದ ಸೇತುವೆ ಕುಸಿತ; ಮೂವರು ಭಾರತೀಯ ಕಾರ್ಮಿಕರ ದುರ್ಮರಣ

    ಕಠ್ಮಂಡು: ಭೂತಾನ್​ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದ್ದು, ಮೂರು ಭಾರತೀಯ ಕಾರ್ಮಿಕರು ಮೃತರಾಗಿದ್ದಾರೆ. ಇನ್ನೂ ಕೆಲ ಕಾರ್ಮಿಕರು ಕಾಣೆಯಾಗಿರುವುದಾಗಿ ಹೇಳಲಾಗಿದೆ.

    ರಾಜಧಾನಿ ತಿಮ್ಫುವಿನ ನೈಋತ್ಯ ಭಾಗದಲ್ಲಿ 60 ಕಿಮೀ ದೂರದಲ್ಲಿ ನಿರ್ಮಾಣವಾಗುತ್ತಿರುವ ವಾಂಗ್ಚು ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸೇತುವೆಯು ಭಾಗಶಃ ನಿರ್ಮಾಣವಾಗಿತ್ತು. ಒಂಬತ್ತು ಕಾರ್ಮಿಕರು ಸೇತುವೆಯ ಮೇಲೆ ನಿಂತು ಕೆಲಸ ಮಾಡುತ್ತಿದ್ದರು. ಏಕಾಏಕಿ ಕುಸಿದು ಬಿದ್ದಿರುವುದಕ್ಕೆ ಕಾರಣವಿನ್ನು ತಿಳಿದುಬಂದಿಲ್ಲ. ಈಗಾಗಲೇ ಮೂರು ಶವಗಳು ಪತ್ತೆಯಾಗಿವೆ. ಆ ಮೂವರು ಭಾರತೀಯರೂ ಎನ್ನಲಾಗಿದೆ.

    ಮೃತರಾದ ಕಾರ್ಮಿಕರಿಗೆ ಪ್ರಧಾನಿ ಲೋಟೇ ತ್ಸೆರಿಂಗ್​ ಸಂತಾಪ ಸೂಚಿಸಿದ್ದಾರೆ. ಕಾಣೆಯಾದವರು ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.

    ಭೂತಾನ್​ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಹಾ ಜಿಲ್ಲೆಯನ್ನು ಪಾರೊದೊಂದಿಗೆ ಸಂಪರ್ಕಿಸುವ ಗುರಿಯನ್ನು ಈ ಸೇತುವೆ ಹೊಂದಿತ್ತು. (ಏಜೆನ್ಸೀಸ್​)

    ಮೆಟ್ರೋ ರೈಲಿನಲ್ಲಿ ರವಾನೆಯಾಯ್ತು ಜೀವಂತ ಹೃದಯ- ಇದನ್ನು ಸಾಗಿಸಿದ್ದೇ ರೋಚಕ

    ಆ ‘ಮಹಿಳೆಯರು’ ಹೆದ್ದಾರಿಯಲ್ಲಿ ಲಿಫ್ಟ್ ಕೇಳಿದರು; ಆಮೇಲೆ ಆಗಿದ್ದೇ ಬೇರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts