

ವಡೋದರ: ಆಸ್ಟ್ರೇಲಿಯಾ ಪ್ರವಾಸದ ಸರಣಿ ಸೋಲಿನಿಂದ ಪುಟಿದೆದ್ದಿರುವ ಭಾರತ ಮಹಿಳಾ ತಂಡ ತವರಿನಲ್ಲಿ ತನ್ನ ಪ್ರಾಬಲ್ಯವನ್ನು ಕಾಪಾಡಿಕೊಂಡಿದೆ. ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಮಹಿಳಾ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಶುಕ್ರವಾರ ನಡೆಯಲಿದೆ. ಈಗಾಗಲೇ ಸರಣಿ ಜಯಿಸಿರುವ ಹರ್ಮಾನ್‌ಪ್ರೀತ್ ಕೌರ್ ಪಡೆ ಕ್ಲೀನ್‌ಸ್ವೀಪ್ ನಿರೀಕ್ಷೆಯಲ್ಲಿದೆ. ಸತತವಾಗಿ 2 ಪಂದ್ಯಗಳಲ್ಲಿ 300 ಪ್ಲಸ್ ರನ್‌ಗಳಿಸುವ ಮೂಲಕ ರನ್‌ಮಳೆ ಹರಿಸಿರುವ ಹರ್ಮಾನ್‌ಪ್ರೀತ್ ಕೌರ್ ಬಳಗ ಸರಣಿಯಲ್ಲಿ ಏಕಪಕ್ಷೀಯವಾಗಿ ಪ್ರಾಬಲ್ಯ ಸಾಧಿಸಿದೆ.
ಉಪನಾಯಕಿ ಸ್ಮತಿ ಮಂದನಾ ಭರ್ಜರಿ ಾರ್ಮ್‌ನಲಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. ಶೆಾಲಿ ವರ್ಮ ಬದಲಿಗೆ ಅವಕಾಶ ಪಡೆದ ಪ್ರತೀಕಾ ರಾವಲ್ ಆರಂಭಿಕ 2 ಪಂದ್ಯಗಳಲ್ಲಿ ಗಮನಸೆಳೆಯುವ ಮೂಲಕ ಭವಿಷ್ಯದ ಭರವಸೆಯಾಗಿ ಕಾಣಿಸಿಕೊಂಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ಹರ್ಲೀನ್ ಡಿಯೋಲ್ 100ರ ಸ್ಟ್ರೈಕ್ ರೇಟ್‌ನಲ್ಲಿ ಹಿಂದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ. ಹರ್ಮಾನ್‌ಪ್ರೀತ್ ಕೌರ್ ಸಂಪೂರ್ಣವಾಗಿ ಫಿಟ್ನೆಸ್ ಪಡೆದ ಬಳಿಕ ಉತ್ತಮವಾಗಿ ಕಾಣಿಸಿಕೊಂಡಿದ್ದರೂ, ದೊಡ್ಡ ಇನಿಂಗ್ಸ್‌ನ ಕೊರತೆ ಎದುರಿಸಿದ್ದಾರೆ.
ಭಾರತ ಪಾಲಿಗೆ ಔಪಚಾರಿಕ ಎನಿಸಿರುವ ಪಂದ್ಯದಲ್ಲಿ ತನುಜಾ ಕನ್ವರ್, ತೇಜಲ್ ಹಸನ್‌ಬೀಸ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.ರೇಣುಕಾ ಸಿಂಗ್ ಠಾಕೂರ್ ಯುಬ ಬೌಲಿಂಗ್‌ವನ್ನು ಸಮರ್ಥವಾಗಿ ಮುನ್ನಡೆಸಿದ್ದು, ಯುವ ಸ್ಪಿನ್ನರ್ ಪ್ರಿಯಾ ಮಿಶ್ರಾ ಬಲ ತುಂಬಲಿದ್ದಾರೆ.
ಟಿ20 ಹಾಗೂ ಏಕದಿನ ಸರಣಿ ಕೈ ಚೆಲ್ಲಿರುವ ವೆಸ್ಟ್‌ಇಂಡೀಸ್ ಗೆಲುವಿನೊಂದಿಗೆ ಭಾರತ ಪ್ರವಾಸ ಮುಕ್ತಾಯಗೊಳಿಸುವ ಹಂಬಲದಲ್ಲಿದೆ. ಆದರೆ ವಿಂಡೀಸ್ ಬ್ಯಾಟಿಂಗ್,ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ನೀಡಿದರಷ್ಟೇ ಗೆಲುವು ಸಾಧಿಸಬಹುದಾಗಿದೆ.
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ.