

ಚಾಂಗ್‌ಝೌ (ಚೀನಾ): ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಪದಕ ಜಯಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಎಚ್‌ಎಸ್ ಪ್ರಣಯ್, ಯುವ ಷಟ್ಲರ್ ಲಕ್ಷ್ಯ ಸೇನ್ ಮಂಗಳವಾರ ಆರಂಭವಾಗಲಿರುವ ಚೀನಾ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯರ ಸವಾಲು ಮುನ್ನಡೆಸಲಿದ್ದಾರೆ. ಏಷ್ಯನ್ ಗೇಮ್ಸ್‌ಗೆ ಈ ಟೂರ್ನಿ ಪೂರ್ವ ಸಿದ್ಧತೆ ಎನಿಸಿದೆ. ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಕೊನೇ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಏಷ್ಯನ್ ಗೇಮ್ಸ್‌ನತ್ತ ಗಮನ ಹರಿಸಸುವ ನಿಟ್ಟಿನಲ್ಲಿ ಇದರೊಂದಿಗೆ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರ್ತಿಯರು ಇಲ್ಲದಂತಾಗಿದೆ. ವಿಶ್ವ ಚಾಂಪಿಯನ್‌ಷಿಪ್ ಪ್ರದರ್ಶನದ ಬಳಿಕ ವೃತ್ತಿಜೀವನದ ಉನ್ನತ ಶ್ರೇಯಾಂಕ ಪಡೆದಿರುವ ಪ್ರಣಯ್ ಆರಂಭಿಕ ಪಂದ್ಯದಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. 16ರ ಘಟ್ಟದಲ್ಲಿ ವಿಶ್ವದ ನಂ. 4 ಮತ್ತು ಮೂರನೇ ಶ್ರೇಯಾಂಕಿತ ಥಾಯ್ಲೆಂಡ್ ಕುನ್ಲವುಟ್ ವಿಟಿಡ್ಸಾರ್ನ್ ಎದುರಾಗುವ ನಿರೀಕ್ಷೆ ಇದೆ. ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲೆನ್ ಸೆಮಿಫೈನಲ್‌ನಲ್ಲಿ ಮತ್ತೊಮ್ಮೆ ಪ್ರಣಯ್ ಮುಖಾಮುಖಿಯಾಉವ ಸಾಧ್ಯತೆಗಳಿವೆ. ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್‌ಗೆ ಟೂರ್ನಿಯಲ್ಲಿ ಕಠಿಣ ಹಾದಿ ಎದುರಾಗಿದ್ದು, ಮೊದಲ ಸುತ್ತಿನಲ್ಲಿ ಅಂಡರ್ಸ್ ಅಂಟೊಸೆನ್ ಸವಾಲು ಎದುರಿಸಲಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಅಚ್ಚರಿಯ ಸೋಲಿನ ಬಳಿಕ ಫಾಮ್ರ್ ಮರಳಲು ಭಾರತೀಯ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ರಾಂಕಿ ರೆಡ್ಡಿ- ಚಿರಾಗ್ ಶೆಟ್ಟಿಗೆ ಟೂರ್ನಿ ಉತ್ತಮ ವೇದಿಕೆ ಎನಿಸಿದೆ. ಇಂಡೋನೇಷ್ಯಾದ ಮೊಹಮದ್ ಶೊಯಿಬುಲ್ ಫ್ರಿಕ್ರಿ-ಬಗಾಸ್ ಮೌಲನಾ ಎದುರು ಅಭಿಯಾನ ಆರಂಭಿಸಲಿದ್ದಾರೆ.