ಡಾರ್ನಿಯರ್​ ವಿಮಾನ ಚಲಾಯಿಸಲು ಸಿದ್ಧವಾಗಿದೆ ಮೊದಲನೇ ಮಹಿಳಾ ಪೈಲಟ್ ತಂಡ

women pilots dornier
Published on

ನವದೆಹಲಿ: ಭಾರತೀಯ ನೌಕಾಪಡೆಯ ಡಾರ್ನಿಯರ್​ ವಿಮಾನಗಳನ್ನು ಚಲಾಯಿಸುವುದಕ್ಕೆ ಮೂವರು ಮಹಿಳಾ ಪೈಲಟ್​ಗಳ ಒಂದು ತಂಡ ಇದೀಗ ಸಿದ್ಧವಾಗಿದೆ. ಡಾರ್ನಿಯರ್ ಆಪರೇಷನಲ್ ಫ್ಲೈಯಿಂಗ್ ಟ್ರೈನಿಂಗ್ ನ 9 ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಮೂವರು ಮಹಿಳಾ ಪೈಲಟ್​ಗಳು ಗುರುವಾರ ಕೊಚ್ಚಿಯ ವಾಯುನೆಲೆಯಲ್ಲಿ ಅರ್ಹತಾ ಪತ್ರವನ್ನು ಸ್ವೀಕರಿಸಿದ್ದಾರೆ.

ದೆಹಲಿಯ ಮಾಲ್ಟಿಯಾ ನಗರದ ಲೆಫ್ಟಿನೆಂಟ್ ದಿವ್ಯಾ ಶರ್ವ, ಉತ್ತರ ಪ್ರದೇಶದ ಟಿಲ್ಹಾರದ ಲೆಫ್ಟಿನೆಂಟ್ ಶುಭಾಂಗಿ ಸ್ವರೂಪ್ ಮತ್ತು ಬಿಹಾರದ ಮುಜಾಫರ್​ಪುರದ ಲೆಫ್ಟಿನೆಂಟ್ ಶಿವಾಂಗಿ ಅರ್ಹತಾ ಪತ್ರ ಸ್ವೀಕರಿಸಿದ ಮಹಿಳಾ ಪೈಲಟ್​ಗಳು. ಇವರ ಜತೆ ಅರ್ಹತೆ ಪಡೆದ ಆರು ಪೈಲೆಟ್​ಗಳಿಗೂ ಪತ್ರ ವಿತರಿಸಲಾಗಿದೆ.

ಸದರ್ನ್ ನೇವಲ್ ಕಮಾಂಡ್ (ಎಸ್​ಎನ್​ಸಿ) ಮುಖ್ಯ ಸಿಬ್ಬಂದಿ ಅಧಿಕಾರಿ ಅಡ್ಮಿರಲ್ ಆಂಟನಿ ಜಾರ್ಜ್ ಪೈಲೆಟ್​ಗಳಿಗೆ ಅರ್ಹತಾಪತ್ರ ಪ್ರಧಾನ ಮಾಡಿದರು. ಈ ಎಲ್ಲ ಪೈಲಟ್​ಗಳು ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ.  ಎಂಟು ತಿಂಗಳ ಕಾಲ ಡಾರ್ನಿಯರ್ ಸ್ಕ್ವಾಡ್ರನ್​ನೊಂದಿಗೆ ತರಬೇತಿ ನೀಡಲಾಗಿತ್ತು. ಒಂದು ತಿಂಗಳು ಎಸ್​ಎನ್​ಸಿಯ ವಿವಿಧ ವೃತ್ತಿಪರ ಶಾಲೆಗಳಲ್ಲಿ ತರಬೇತಿ ನೀಡಲಾಗಿತ್ತು. ಮಹಿಳಾ ಪೈಲೆಟ್ ಆಗಿ ಮೊದಲು ಆಯ್ಕೆಯಾದ ಲೆಫ್ಟಿನೆಂಟ್ ಶಿವಾಂಗಿ ನೂತನ ರಫೇಲ್ ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net