

south-korea ; ದಕ್ಷಿಣ ಕೊರಿಯಾದಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ದೇಶದ ಮಾತೃತ್ವ ಬೆಂಬಲ ವ್ಯವಸ್ಥೆಯತ್ತ ಗಮನ ಸೆಳೆದಿದೆ ಮತ್ತು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ.
ದಕ್ಷಿಣ ಕೊರಿಯಾದ ವ್ಯಕ್ತಿಯನ್ನು ಮದುವೆಯಾಗಿ ಈಗ ತಾಯಿಯಾಗಿರುವ ನೇಹಾ ಅರೋರಾ, ಗರ್ಭಾವಸ್ಥೆಯಲ್ಲಿ ಮತ್ತು ನಂತರ ತನಗೆ ದೊರೆತ ಸರ್ಕಾರಿ ಬೆಂಬಲವನ್ನು ತಮ್ಮ ರೀಲ್‌ನಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಗರ್ಭಿಣಿಯರಿಗೆ ನೀಡಲಾಗುವ ಹಣಕಾಸಿನ ನೆರವಿನ ವಿವರಗಳನ್ನು ತಿಳಿದು ಅನೇಕ ವೀಕ್ಷಕರು, ವಿಶೇಷವಾಗಿ ಭಾರತದವರು ಆಶ್ಚರ್ಯಗೊಂಡಿದ್ದಾರೆ.
ತನ್ನ ಗರ್ಭಧಾರಣೆಯನ್ನು ದೃಢಪಡಿಸಿದ ತಕ್ಷಣ, ಕೊರಿಯನ್ ಸರ್ಕಾರವು ವೈದ್ಯಕೀಯ ತಪಾಸಣೆ ಮತ್ತು ಔಷಧಿಗಳಿಗಾಗಿ ರೂ. 63,100 ನೀಡಿತು. ಅದರ ಜೊತೆಗೆ ಬಸ್, ಟ್ಯಾಕ್ಸಿ ಅಥವಾ ಖಾಸಗಿ ವಾಹನದ ಮೂಲಕ ಸಾರ್ವಜನಿಕ ಸಾರಿಗೆ ವೆಚ್ಚಕ್ಕಾಗಿ ಅವರಿಗೆ ರೂ. 44,030 ನೀಡಲಾಯಿತು. ವಿಶೇಷ ಪ್ರಯೋಜನಗಳ ಜೊತೆಗೆ ಹೆರಿಗೆಯ ಸಮಯದಲ್ಲಿ ನಾನು ರೂ. 1.26 ಲಕ್ಷ ಮೊತ್ತವನ್ನು ಪಡೆದೆ ಎಂದು ನೇಹಾ ಅರೋರಾ ತಿಳಿಸಿದ್ದಾರೆ. ಮಗು ಜನಿಸಿದ ನಂತರವೂ ಬೆಂಬಲ ನಿಲ್ಲಲಿಲ್ಲ. ಕೊರಿಯನ್ ಸರ್ಕಾರವು ಮಗುವನ್ನು ಬೆಳೆಸಲು ಮಾಸಿಕ ಆರ್ಥಿಕ ಸಹಾಯವನ್ನು ನೀಡುತ್ತಲೇ ಇತ್ತು. ಮಗುವಿನ ಮೊದಲ ವರ್ಷಕ್ಕೆ ಪ್ರತಿ ತಿಂಗಳು ರೂ. 63,100, ಎರಡನೇ ವರ್ಷಕ್ಕೆ ರೂ. 31,000 ಮತ್ತು ಮಗುವಿನ ಎರಡು ವರ್ಷದಿಂದ ಎಂಟರವರೆಗೆ ತಿಂಗಳಿಗೆ ರೂ. 12,600 ಪಡೆದೆ ಎಂದಿದ್ದಾರೆ.
(ಏಜೆನ್ಸೀಸ್)
ಈ ವಿಡಿಯೋ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅನೇಕ ವೀಕ್ಷಕರು ದಕ್ಷಿಣ ಕೊರಿಯಾದ ಉದಾರ ಬೆಂಬಲಕ್ಕಾಗಿ ಶ್ಲಾಘಿಸಿದ್ದಾರೆ. ಆದರೆ ಕೆಲವು ಭಾರತೀಯ ಬಳಕೆದಾರರು ಇದನ್ನು ಭಾರತದಲ್ಲಿನ ಸೀಮಿತ ಮಾತೃತ್ವ ಪ್ರಯೋಜನಗಳಿಗೆ ಹೋಲಿಸಿದ್ದಾರೆ.
ಈ ವಿಡಿಯೋವನ್ನು ಸೆಪ್ಟೆಂಬರ್ 1, 2025 ರಂದು ಹಂಚಿಕೊಳ್ಳಲಾಗಿದ್ದು, ಅಂದಿನಿಂದ ಇದು 6.5 ಮಿಲಿಯನ್ ವೀಕ್ಷಣೆಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.