USನಲ್ಲಿ ಖಲಿಸ್ತಾನ ಪರ ಪ್ರತಿಭಟನೆ; ಭಾರತ ಮೂಲದ ಪತ್ರಕರ್ತನ ಮೇಲೆ ಹಲ್ಲೆ

New Project (4)
Published on

ವಾಷಿಂಗ್ಟನ್​​: ಇಲ್ಲಿನ ಭಾರತೀಯ ರಾಯಭಾರ ಕಛೇರಿ ಎದುರು ಖಲಿಸ್ತಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರು ಭಾರತ ಮೂಲದ ಪತ್ರಕರ್ತ ಲಲಿತ್​ ಝಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ತಮ್ಮ ಮೇಲಿನ ಹಲ್ಲೆ ಕುರಿತು ಪ್ರತಿಕ್ರಿಯಿಸಿರುವ ಲಲಿತ್​ ಝಾ ವಿವಿಧ ಭಾಗಗಳಿಂದ ಆಗಮಿಸಿದ ಖಲಿಸ್ತಾನಿ ಬೆಂಬಲಿಗರು ಅಮೃತ್​ಪಾಲ್​ ಸಿಂಗ್​ಗೆ ಬೆಂಬಲ ಸೂಚಿಸುತ್ತಾ ಪಂಜಾಬ್​ ಪೊಲೀಸರು ಹಾಗೂ ಭಾರತದ ವಿರುದ್ದ ಘೋಷಣೆಗಳನ್ನ ಕೂಗಲು ಶುರು ಮಾಡಿದ್ದರು.

ನಾನು ನನ್ನ ಕೆಲಸವನ್ನ ಮಾಡುತ್ತಿದೆ ವ್ಯಕ್ತಿ ಒಬ್ಬ ಕೋಲಿನಿಂದ ನನ್ನ ಎಡಕಿವಿಗೆ ಬಾರಿಸಿದ ನಾನು ತಕ್ಷಣ US ಸೀಕ್ರೆಟ್​ ಸರ್ವೀಸ್​ಗೆ ಕರೆ ಮಾಡಿ ರಕ್ಷಣೆಗೆ ಕೋರಿದೆನು. ಕೂಡಲೇ ನನ್ನಗೆ ರಕ್ಷಣೆ ನೀಡಲಾಯಿತು. ಇಲ್ಲವಾದಲ್ಲಿ ನಾನು ಆಸ್ಪತ್ರೆಯಲ್ಲಿ ಇದ್ದುಕೊಂಡು ಇದನ್ನು ಬರೆಯಬೇಕಾಗಿತ್ತು ಎಂದು ಲಲಿತ್​ ಝಾ ಪ್ರತಿಕ್ರಿಯಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಾಯಭಾರ ಕಚೇರಿ ಇಂತಹ ಚಟುವಟಿಕೆಗಳು ಖಲಿಸ್ತಾನಿ ಹೋರಾಟಗಾರರ ಮನಸ್ಥಿತಿಯನ್ನ ಒತ್ತಿ ಹೇಳುತ್ತದೆ. ಇಂತಹ ಕೃತ್ಯಗಳನ್ನ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಹೋರಾಟಗಾರರಿಗೆ ಎಚ್ಚರಿಕೆಯನ್ನ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net