ಟೋಕಿಯೋ ಒಲಂಪಿಕ್ಸ್​ ಸಮಾರಂಭಗಳಿಗೆ ಫ್ಲ್ಯಾಗ್​ಬೇರರ್ಸ್ ಆಯ್ಕೆ

tokyo
Published on

ನವದೆಹಲಿ : ಬಾಕ್ಸರ್​ ಎಂಸಿ ಮೇರಿ ಕೋಮ್​ ಮತ್ತು ಹಾಕಿ ಆಟಗಾರ ಮನ್​ಪ್ರೀತ್​ ಸಿಂಗ್​ ಅವರನ್ನು ಟೋಕಿಯೋ ಒಲಂಪಿಕ್ಸ್​ನ ಉದ್ಘಾಟನಾ ಸಮಾರಂಭಕ್ಕೆ ಭಾರತ ತಂಡದ ಫ್ಲ್ಯಾಗ್​ ಬೇರರ್ಸ್​ ಆಗಿ ಘೋಷಿಸಲಾಗಿದೆ. ಕುಸ್ತಿಪಟು ಬಜರಂಗ್ ಪೂನಿಯ ಅವರನ್ನು ಸಮಾರೋಪ ಸಮಾರಂಭದ ಫ್ಲ್ಯಾಗ್​ ಬೇರರ್​ ಆಗಿ ಆಯ್ಕೆ ಮಾಡಲಾಗಿದೆ.

ಜಪಾನ್ ರಾಜಧಾನಿ ಟೋಕಿಯೋದಲ್ಲಿ ಈ ತಿಂಗಳ ಜುಲೈ 23 ರ ಶುಕ್ರವಾರ ಆರಂಭವಾಗಲಿರುವ ಒಲಂಪಿಕ್ ಗೇಮ್ಸ್​ ಆಗಸ್ಟ್​ 8 ರ ಭಾನುವಾರದವರೆಗೆ ನಡೆಯಲಿದೆ. ಕಳೆದ ವರ್ಷವೇ ನಡೆಯಬೇಕಿದ್ದ ಒಲಂಪಿಕ್ಸ್​ ಪಂದ್ಯಾವಳಿಯು ಕರೊನಾದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ನಡೆಯಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net