ಭಾರತೀಯ ವಸ್ತ್ರ ವಿನ್ಯಾಸ ಸಂಸ್ಥೆಯ ಉಡುಪು ತೊಟ್ಟ ಬ್ರಿಟನ್ ಪ್ರಧಾನಿ ಪತ್ನಿ ಅಕ್ಷತಾ ಮೂರ್ತಿ

Indian designer on Akshata Murty wearing outfit from her label during G20
Published on

ನವದೆಹಲಿ: ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಗೆ ಭಾರತೀಯ ಮೂಲದವರಾಗಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜತೆ ಪತ್ನಿ ಅಕ್ಷತಾ ಮೂರ್ತಿ ಕೂಡಾ ಬಂದಿದ್ದರು. ಇವರು ತೊಡುತ್ತಿರುವ ಭಾರತೀಯ ಉಡುಪುಗಳು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಅಕ್ಷತಾ ಮೂರ್ತಿ ಭಾರತೀಯ ಉಡುಗೆಗಳನ್ನು ತೊಟ್ಟು ಶೃಂಗಸಭೆಯಲ್ಲಿ ಮಿಂಚಿದ್ದರು. ಈಗ ರಿಯಾ ಭಟ್ಟಾಚಾರ್ಯರ ಡ್ರಾನ್ ಎಂಬ ಕಂಪನಿ ವಿನ್ಯಾಸಗೊಳಿಸಿದ ಬಟ್ಟೆ ತೊಟ್ಟು ಬ್ರಿಟಿಷ್ ಕೌನ್ಸಿಲ್​ಗೆ ಭೇಟಿ ನೀಡಿದ್ದಾರೆ.

ವಸ್ತ್ರ ವಿನ್ಯಾಸಕಿಯಾಗಿರುವ ರಿಯಾ ಡಿಸೈನ್​​ ಮಾಡಿರುವ ಮಲ್ಟಿ ಹ್ಯೂಡ್ ಶರ್ಟ್​ ಮತ್ತು ಸ್ಕರ್ಟ್​ ಧರಿಸಿದ್ದ ಅಕ್ಷತಾ ಮೂರ್ತಿ ಫೋಟೋ ವೈರಲ್ ಆಗಿದೆ. ಈ ಡ್ರೆಸ್ ಸುಮಾರು 14,000 ರೂ. ಬೆಲೆ ಬಾಳುತ್ತದೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಸ್ತ್ರ ವಿನ್ಯಾಸಕಿ ರಿಯಾ, "ಅಕ್ಷತಾ ಮೂರ್ತಿಯವರ ತಂಡ ನಮ್ಮ ಬಟ್ಟೆಗಳನ್ನು ಖರೀದಿಸಿದ್ದಾರೆ ಎಂಬ ವಿಷಯವೇ ತಿಳಿದಿರಲಿಲ್ಲ. ನಮ್ಮ ವೈಲ್ಡ್ ಐರಿಶ್ ಸೆಟ್​ಗಳನ್ನು ಬ್ರಿಟಿಷ್ ಕೌನ್ಸಿಲ್​ನಲ್ಲಿ ಧರಿಸಿರುವ ಚಿತ್ರವನ್ನು ಫಾಲೋವರ್​ ಒಬ್ಬರು ಕಳುಹಿಸಿದಾಗ ತಿಳಿಯಿತು. ಅಕ್ಷತಾ ಮೂರ್ತಿ ಇನ್ನೂ ಬೆಳೆಯುತ್ತಿರುವ ನಮ್ಮ ಬ್ರ್ಯಾಂಡ್​ನ ಬಟ್ಟೆಗಳನ್ನು ತೊಟ್ಟು ಇಡೀ ವಿಶ್ವಕ್ಕೇ ಪರಿಚಯಿಸಿದ್ದಾರೆ. ಇದು ನಮಗೆ ಅದ್ಭುತವಾದ ಕ್ಷಣ" ಎಂದು ಸಂತೋಷ ವ್ಯಕ್ತ ಪಡಿಸಿದ್ದಾರೆ.

ಅಕ್ಷತಾ ಮೂರ್ತಿಯವರು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ್ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪುತ್ರಿಯಾಗಿದ್ದು, ಸ್ವತಃ ಫ್ಯಾಷನ್ ಡಿಸೈನರ್. ಇವರು 2009ರಲ್ಲಿ ಈಗಿನ ಬ್ರಿಟನ್ ಪ್ರಧಾನಿ ರಿಷಿ ಸುನಕ್​ರವರನ್ನು ಮದುವೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net