ಇವರು ಯಾರು ಬಲ್ಲಿರೇನು? ಲಾಕ್​ಡೌನ್​ ನಡುವೆ ಹೊಸಲುಕ್​ನಲ್ಲಿ ಗಮನ ಸೆಳೆದ ಇವರನ್ನು ಗುರುತಿಸಿ..

Kapil Dev 21 April 20
Published on

ನವದೆಹಲಿ: ಇಡೀ ದೇಶವೇ ಲಾಕ್​ಡೌನ್ ಆಗಿರುವ ಸಮಯದಲ್ಲಿ 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಹೊಸ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಕೇಶಮುಂಡನ ಮಾಡಿಸಿಕೊಂಡಿರುವ 61 ವರ್ಷದ ಕಪಿಲ್, ಗಡ್ಡವನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಕಪು್ಪ ಸೂಟ್ ಧರಿಸಿ ಕಪಿಲ್ ನೀಡಿರುವ ಪೋಸ್​ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ, ಅವರ ಮಾಜಿ ಸಹ-ಆಟಗಾರ ಚೇತನ್ ಶರ್ಮ ಹೊಸ ಲುಕ್ ಬಹಿರಂಗಪಡಿಸಿದ್ದಾರೆ. ‘ಲೆಜೆಂಡರಿ ಕಪಿಲ್ ದೇವ್ ಅವರ ಹೊಸ ಲುಕ್. ನಾನಿದನ್ನು ಇಷ್ಟ ಪಟ್ಟೆ. ಪಾಜಿ ನಿಮ್ಮನ್ನು ವಿಭಿನ್ನ ಲುಕ್​ನಲ್ಲಿ ನೋಡಲು ಖುಷಿಯಾಗುತ್ತಿದೆ. ಅಮೋಘ’ ಎಂದು ಚೇತನ್ ಶರ್ಮ ಟ್ವೀಟಿಸಿದ್ದಾರೆ.

ಕ್ರಿಕೆಟ್ ಆಡುವ ದಿನಗಳಲ್ಲಿ ಗುಂಗುರು ಕೂದಲಿನಿಂದಲೇ ಗಮನ ಸೆಳೆದಿದ್ದ ಕಪಿಲ್, ಹಿಂದೆಯೂ ಹೊಸ ಲುಕ್​ಗಳ ಪ್ರಯೋಗವನ್ನು ಇಷ್ಟಪಡುತ್ತಿದ್ದರು. ಅಭಿಮಾನಿಗಳು ಈ ಹೊಸ ಲುಕ್ ಅನ್ನು ವೆಸ್ಟ್ ಇಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್​ಗೆ ಹೋಲಿಸಿದ್ದಾರೆ. ಮತ್ತೆ ಕೆಲವರು ‘ಕಪಿಲ್ ಡೆವಿಲ್ಸ್’ ಸದಸ್ಯ ಸಯ್ಯದ್ ಕಿರ್ವನಿಗೂ ಹೋಲಿಸಿದ್ದಾರೆ. ಈ ಮುನ್ನ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ತಮ್ಮ ಕೂದಲನ್ನು ತಾವೇ ಕತ್ತರಿಸಿಕೊಳ್ಳುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಗಮನಸೆಳೆದಿದ್ದರೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂದಲನ್ನು ಪತ್ನಿ ಅನುಷ್ಕಾ ಶರ್ಮ ಕತ್ತರಿಸಿದ್ದರು. ಬಳಿಕ ಕೊಹ್ಲಿ ಗಡ್ಡವನ್ನು ಟ್ರಿಮ್ ಮಾಡಿಕೊಂಡು ‘ಟ್ರಿಮ್ ಎಟ್ ಹೋಮ್ ಚಾಲೆಂಜ್’ ಎಂಬ ಹೊಸ ಅಭಿಯಾನವನ್ನೂ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದರು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net