ಕೃಷಿಕರು ಮತ್ತು ಸ್ವಸಹಾಯ ಗುಂಪಿನ ನೆರವಿಗೆ ವಿಶೇಷ ಸಾಲ ಯೋಜನೆ ಪ್ರಕಟಿಸಿದ ಇಂಡಿಯನ್​ ಬ್ಯಾಂಕ್​

indian bank-web
Published on

ಬೆಂಗಳೂರು: ಕೋವಿಡ್​ 19 ಪಿಡುಗಿನಿಂದ ರೈತರು, ಆಹಾರ ಮತ್ತು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು ಮತ್ತು ಸ್ವಸಹಾಯ ಗುಂಪಿನ ಸದಸ್ಯರು ತೀವ್ರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರೆಲ್ಲರಿಗೆ ನೆರವಾಗಲು ಇಂಡಿಯನ್​ ಬ್ಯಾಂಕ್​ ಮುಂದಾಗಿದೆ.

ಇದಕ್ಕಾಗಿ ಅದು Ind Covid Emergency Agro Processing Loan, Ind Covid Emergency Poultry Loan, Ind KCC-Covid Sahaya Loan ಮತ್ತು SHG Covid Sahaya Loan ಎಂಬ ನಾಲ್ಕು ವಿಧದ ಸಾಲ ಯೋಜನೆಗಳನ್ನು ಪ್ರಕಟಿಸಿದೆ.

ಇಂಡ್​ ಕೋವಿಡ್​ ಎಮರ್ಜೆನ್ಸಿ ಆಗ್ರೋ ಪ್ರೊಸೆಸಿಂಗ್​ ಲೋನ್​ ಯೋಜನೆಯಡಿ ಆಹಾರ ಮತ್ತು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳಿಗೆ ಶೇ.10 ದುಡಿಯುವ ಬಂಡವಾಳ, ಇಂಡ್​ ಕೋವಿಡ್​ ಎಮರ್ಜೆನ್ಸಿ ಪೌಲ್ಟ್ರಿ ಲೋನ್​ ಯೋಜನೆಯಡಿ ಪೌಲ್ಟ್ರಿಗಳ ಮಾಲೀಕರು ಶೇ.20 ದುಡಿಯುವ ಬಂಡವಾಳ ಮತ್ತು ಪಶುಸಾಕಾಣಿಕೆ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಇಂಡ್​ ಕೆಸಿಸಿ ಕೋವಿಡ್​ ಸಹಾಯ್​ ಲೋನ್​ ಯೋಜನೆಯಡಿ ಶೇ.10 ಮೆದುಸಾಲ (ಸಾಫ್ಟ್​ ಲೋನ್​) ಪಡೆದುಕೊಳ್ಳಬಹುದು.

ಎಸ್​ಎಚ್​ಜಿ ಕೋವಿಡ್​ ಸಹಾಯ ಲೋನ್​ ಯೋಜನೆಯಡಿ ಸ್ವಸಹಾಯ ಗುಂಪಿನ ಮಹಿಳೆಯರು ತಲಾ 5 ಸಾವಿರ ರೂ.ನಂತೆ ಸಾಲ ಪಡೆದುಕೊಳ್ಳಬಹುದಾಗಿದೆ. ಒಂದು ಸ್ವಸಹಾಯ ಗುಂಪಿನಲ್ಲಿ 20 ಜನರಿದ್ದರೆ 1 ಲಕ್ಷ ರೂ.ವರೆಗೂ ಸಾಲ ಪಡೆದುಕೊಳ್ಳಬಹುದು.

ಈ ಎಲ್ಲ ಯೋಜನೆಗಳಡಿ ಪಡೆಯುವ ಸಾಲವನ್ನು ಮಾಸಿಕ ಸಮಾನ ಕಂತುಗಳಲ್ಲಿ ಪಾವತಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net