

ನವದೆಹಲಿ: ಭಾರತೀಯ ಸೇನಾಪಡೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಮಿಲಿಟರಿ ಪೊಲೀಸ್) ಒಟ್ಟು 99 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಅಂಬಾಲಾ, ಲಖನೌ, ಜಬಲ್ಪುರ, ಬೆಂಗಳೂರು, ಶಿಲ್ಲಾಂಗ್ ಮತ್ತು ಪುಣೆಯಲ್ಲಿ ನೇಮಕಾತಿ ರ್ಯಾಲಿಗಳನ್ನು ನಡೆಸಲು ಯೋಜಿಸಲಾಗಿದೆ.
ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಪಾಸಾಗಿರಬೇಕು. ವಯೋಮಿತಿ- ಕನಿಷ್ಠ 17 1/2 ರಿಂದ 21 ವಯಸ್ಸಿನೊಳಗಿರಬೇಕು. ಅಂದರೆ, 1999ರ ಅಕ್ಟೋಬರ್ 1 ಮತ್ತು 2003 ರ ಏಪ್ರಿಲ್ 1 ರ ಮಧ್ಯೆ ಜನಿಸಿರಬೇಕು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಲಿಖಿತ ಪರೀಕ್ಷೆ), ವೈದ್ಯಕೀಯ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. Joindindianarmy.nic.in ನಲ್ಲಿ ಅಭ್ಯರ್ಥಿಗಳು ಆಗಸ್ಟ್ 31 ರವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಅದೇ ವೆಬ್ಸೈಟ್ ನೋಡಬಹುದು.