VIDEO | ಭಾರತೀಯ ಸೈನಿಕರಿಗೆ ಹಾಕಿ ಕ್ರೀಡಾಂಗಣವಾಯ್ತು ಹಿಮ ತುಂಬಿದ ಲಡಾಖ್

hockey
Published on

ನವದೆಹಲಿ: ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಎಂದು ಕರೆಸಿಕೊಳ್ಳುವ ಲಡಾಖ್ ನ ಹಿಮ ತುಂಬಿದ ನೆಲದಲ್ಲಿ ಭಾರತೀಯ ಸೈನಿಕರು  ಹಾಕಿ ಆಡಿ ಸಂಭ್ರಮಿಸಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಡಿಬಿಒ ,ಸೆಕ್ಟರ್ ನಲ್ಲಿ ಕಾರ್ಯನಿರತವಾಗಿರುವ ಭಾರತೀಯ ಸೈನಿಕರು ಈ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿದರು ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ  ಬಗ್ಗೆ  ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಾಕಷ್ಟು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಬ್ಬರಂತೂ ‘ಕೆಲವು ಚಮಚಾಗಳ ಎದೆ ಮೇಲೆ ಹಾವು ಹರಿದ ಹಾಗೆ ಆಗುತ್ತಿರಬಹುದು’ ಎಂದಿದ್ದಾರೆ.

ಇನ್ನೊಬ್ಬರಂತೂ ಚೀನಿ ಆರ್ಮಿ ಆಡುತ್ತಿದೆ ಎಣದು ರಾಹುಲ್ ಗಾಂಧಿ ಹೇಳುತ್ತಾರೆ ಎಂದು ಬರೆದಿದ್ದಾರೆ. ಈ ಕಾಮೆಂಟ್ ಗಳನ್ನು ಓದಲಾದರೂ ಒಮ್ಮೆ ವಿಡಿಯೋವನ್ನು  ನೋಡಬೇಕು. ಈ ವಿಡಿಯೋವನ್ನು 15 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಪೋಸ್ಟ್ ಅನ್ನು 34 ಸಾವಿರ ಜನ ನೋಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net