ಲಡಾಖ್​ನಲ್ಲಿ ಗಡಿ ದಾಟಿ ಭಾರತಕ್ಕೆ ಬಂದ ಚೀನಾ ಸೈನಿಕ; ವಶಕ್ಕೆ ಪಡೆದ ಭಾರತೀಯ ಸೇನೆ

ಚಿನಅ
Published on

ಲಡಾಖ್​: ಚೀನಾ ಮತ್ತು ಭಾರತದ ನಡುವಿನ ಬಿಕ್ಕಟ್ಟಿನ ನಡುವೆಯೇ ಚೀನಾದ ಸೈನಿಕನೊಬ್ಬ ಲಡಾಖ್​ನಲ್ಲಿರುವ ಗಡಿ ದಾಟಿ ಭಾರತಕ್ಕೆ ಬಂದಿದ್ದು, ಭಾರತೀಯ ಸೈನಿಕರು ಆತನನ್ನು ವಶಕ್ಕೆ ಪಡೆದಿದ್ದಾರೆ. ಸೈನಿಕನು ದಾರಿ ತಪ್ಪಿ ಬಂದಿರುವ ಹಿನ್ನೆಲೆಯಲ್ಲಿ ಆತನನ್ನು ವಾಪಾಸು ಕಳಿಸುವ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗುತ್ತಿದೆ.

ಮೂಲಗಳ ಪ್ರಕಾರ, ಪೀಪಲ್ಸ್​ ಲಿಬರೇಶನ್​ ಆರ್ಮಿ (ಪಿಎಲ್​ಎ)ಯ ಸೈನಿಕನು ಶುಕ್ರವಾರ ಬೆಳಗ್ಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಗೆ ಬಂದಿದ್ದಾನೆ ಎನ್ನಲಾಗಿದೆ. ತಕ್ಷಣ ಆತನನ್ನು ಭಾರತೀಯ ಯೋಧರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಆತ ದಾರಿ ತಪ್ಪಿ ಈ ಭಾಗಕ್ಕೆ ಬಂದಿರುವುದು ಖಚಿತವಾಗಲಿದೆ. ಹಾಗಾಗಿ ನಿಯಮಾನುಸಾರ ಆತನನ್ನು ಚೀನಾಕ್ಕೆ ಕಳುಹಿಸಿಕೊಡಲಾಗುವುದು. ಇಂದು ಅಥವಾ ನಾಳೆ ಸೈನಿಕನನ್ನು ಚೀನಾಕ್ಕೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net