More

    ಏಷ್ಯಾಕಪ್​​ 2023; ಭಾರತ-ಪಾಕಿಸ್ತಾನ ನಡುವಿನ ಸೂಪರ್​-4 ಪಂದ್ಯಕ್ಕೆ ಮೀಸಲು ದಿನ ನಿಗದಿ

    ಕೊಲಂಬೋ: ಭಾರತ ಹಾಗೂ ಪಾಕಿಸ್ತಾನ ನಡುವೆ ಸೆಪ್ಟೆಂಬರ್​ 10, ಭಾನುವಾರದಂದು ನಡೆಯಲಿರುವ ಹೈವೋಲ್ಟೇಜ್ ಏಷ್ಯಾಕಪ್​ ಟೂರ್ನಿಯ​ ಸೂಪರ್​-4 ಪಂದ್ಯಕ್ಕೆ ಮೀಸಲು ದಿನವನ್ನು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​​ (ACC) ಘೋಷಿಸಿದೆ.

    ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯವು ಮಳೆಯಿಂದಾಗಿ ಅಮಾನತುಗೊಂಡರೆ, ಅಮಾನತುಗೊಳಿಸಿದ ಹಂತದಿಂದ ಮೀಸಲು ದಿನ ಪಂದ್ಯವನ್ನು ನಡೆಸಲಾಗುವುದು. ಪ್ರೇಕ್ಷಕರು ಪಂದ್ಯದ ಟಿಕೆಟ್​ಗಳನ್ನು ಹಾಗೇ ಇಟ್ಟುಕೊಂಡು ಮೀಸಲು ದಿನದಂದು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯವನ್ನು ವೀಕ್ಷಿಸಬಹುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಇದಕ್ಕೂ ಮೊದಲು ಏಷ್ಯಾಕಪ್​ನಲ್ಲಿ ಫೈನಲ್​ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿತ್ತು. ಆದರೆ, ಈ ಭಾರಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮೀಸಲು ದಿನವನ್ನು ನಿಗದಿ ಮಾಡಲಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್​ ಹಂತದ ಪಂದ್ಯವು ಮಳೆಯಿಂದ ರದ್ದುಗೊಂಡಿತ್ತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ 48.5 ಓವರ್​ಗಳಲ್ಲಿ 266ರನ್​ಗಳಿಗೆ ಆಲೌಟ್​ ಆಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts