More

    ಏಕದಿನ ಮಾದರಿ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಹಿಟ್​ ಮ್ಯಾನ್​ ರೋಹಿತ್​ ಶರ್ಮ!

    ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್​ ಇಂಡಿಯಾದ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

    ಏಕದಿನ ಮಾದರಿ ಪಂದ್ಯದಲ್ಲಿ ವೇಗವಾಗಿ 9 ಸಾವಿರ ದಾಖಲಿಸಿದ ಮೂರನೇ ಆಟಗಾರನೆಂಬ ಕೀರ್ತಿಯನ್ನು ರೋಹಿತ್​ ಗಳಿಸಿದ್ದಾರೆ. ವಿಶೇಷವೆಂದರೆ ಅತಿ ನಿಧಾನವಾಗಿ 2000 ರನ್​ ಗಳಿಸಿದ 3ನೇ ಭಾರತೀಯ ಆಟಗಾರನೆಂಬ ದಾಖಲೆಯು ರೋಹಿತ್​ ಹೆಸರಿನಲ್ಲೇ ಇದೆ.​

    ರಾಜ್​ಕೋಟ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 42 ರನ್​ಗೆ ಔಟಾಗುವ ಮೂಲಕ ಕೇವಲ 4 ರನ್​ ಅಂತರದಲ್ಲಿ ಸೌರವ್​ ಗಂಗೂಲಿ ದಾಖಲೆ ಸರಿಗಟ್ಟುವಲ್ಲಿ ವಿಫಲರಾಗಿದ್ದರು. ಇಂದಿನ ಪಂದ್ಯದಲ್ಲಿ ಒಳ್ಳೆಯ ಆರಂಭ ಪಡೆಯುವುದರೊಂದಿಗೆ ವೇಗವಾಗಿ 9 ಸಾವಿರ ರನ್​ ಗಳಿಸಿದ ಮೂರನೇ ಆಟಗಾರ ಎಂಬ ಕಿರ್ತಿಗಳಿಸಿದಲ್ಲದೆ, ಭಾರತದ ಎರಡನೇ ಆಟಗಾರನೆಂಬ ದಾಖಲೆ ನಿರ್ಮಿಸಿ ಗಂಗೂಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

    9 ಸಾವಿರ ರನ್​ ಗಡಿ ಮುಟ್ಟಲು ರೋಹಿತ್​ 217 ಇನ್ನಿಂಗ್ಸ್​ ತೆಗೆದುಕೊಂಡಿದ್ದರೆ, ಗಂಗೂಲಿ 228, ಸಚಿನ್​ ತೆಂಡೂಲ್ಕರ್​ 235 ಹಾಗೂ ಬ್ರಿಯಾನ್​ ಲಾರಾ 239 ಇನ್ನಿಂಗ್ಸ್​ ತೆಗೆದುಕೊಂಡಿದ್ದಾರೆ.

    ಸದ್ಯ ಆಸೀಸ್​ ಪಡೆ ನೀಡಿರುವ 287 ರನ್​ ಗುರಿ ಬೆನ್ನತ್ತಿರುವ ಇಂಡಿಯಾ ರೋಹಿತ್​ ಶರ್ಮ(119) ಮತ್ತು ಕೆ.ಎಲ್​.ರಾಹುಲ್​(19) ವಿಕೆಟ್​ ಕಳೆದುಕೊಂಡು ಗೆಲುವಿನ ಕಡೆ ದಾಪುಗಾಲು ಇಡುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts