More

    ಆಸೀಸ್​ ಪಡೆ ಕಾಡಿದ ಮಹಮ್ಮದ್​ ಶಮಿ: ಸ್ಮಿತ್​ ಶತಕದಾಸರೆಯಿಂದ ಟೀಮ್​ ಇಂಡಿಯಾಗೆ ಸವಾಲಿನ ಗುರಿ

    ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ, ಸ್ಟೀವ್​ ಸ್ಮಿತ್​(131) ಅವರ ಶತಕದಾಟದ ನೆರವಿನಿಂದ ಆತಿಥೇಯ ಭಾರತಕ್ಕೆ 287 ರನ್​ ಸವಾಲಿನ ಗುರಿ ನೀಡಿದೆ.

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸೀಸ್​ ಪಡೆಗೆ ಡೇವಿಡ್​ ವಾರ್ನರ್​(3) ಆರಂಭಿಕ ಆಘಾತ ನೀಡಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ನಾಯಕ ಆ್ಯರೂನ್​ ಫಿಂಚ್​(19) ಕೂಡ ರನೌಟ್​ ಆಗಿ ನಿರ್ಗಮಿಸಿದರು. 46 ರನ್​ಗೆ ಪ್ರಮುಖ 2 ವಿಕೆಟ್​ ಕಳೆದುಕೊಂಡು ಆಸೀಸ್​ ಪಡೆ ಸಂಕಷ್ಟಕ್ಕೆ ಸಿಲುಕಿತು.

    ಮೂರನೇ ಕ್ರಮಾಂಕದಲ್ಲಿ ಬಂದ ಸ್ಮಿತ್ ತಂಡಕ್ಕೆ ಆಸರೆಯಾಗಿ ನಿಂತರು. ನಿಧಾನಗತಿಯ ಬ್ಯಾಟ್​ ಬೀಸುತ್ತಾ ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು. ಈ ವೇಳೆ ಸ್ಮಿತ್​ಗೆ ಸಾಥ್​ ನೀಡಿದ ಮಾರ್ನಸ್​ ಲಬಸ್ಛಗ್ನೆ(54) ರನ್​ಗಳ ಅರ್ಧ ಶತಕ ಗಳಿಸಿ ತಂಡದ ಮೊತ್ತ 173 ರನ್​ ಆಗಿದ್ದಾಗ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಮಿಚೆಲ್​ ಸ್ಟಾರ್ಕ್​ ಯಾವುದೇ ರನ್​ ಖಾತೆ ತೆರೆಯದೇ ಬಂದಷ್ಟೇ ವೇಗವಾಗಿ ವಾಪಸ್ಸಾದರು.

    ಅಲೆಕ್ಸ್​ ಕ್ಯಾರೆ 35 ರನ್​ಗಳ ಉಪಯುಕ್ತ ಕಾಣಿಕೆ ನೀಡಿದರೆ, ಆಸ್ಥಾನ್​ ಟರ್ನರ್​​(4) ಬಂದ ದಾರಿ ಹಿಡಿದರು. ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಸ್ಮಿತ್​ ತಂಡದ ಮೊತ್ತವನ್ನು 270ರ ಗಡಿ ದಾಟಿಸಿ, 131 ರನ್​ಗಳ ಶತಕ ಸಂಭ್ರಮಿಸಿ ತಂಡಕ್ಕೆ ಬೆಂಗಾವಲಾಗಿ ನಿಂತು, ನಿರ್ಗಮಿಸಿದರು. ಇದರ ಬೆನ್ನಲ್ಲೇ ಪ್ಯಾಟ್​ ಕ್ಯುಮಿನ್ಸ್​(0), ಆ್ಯಡಮ್​ ಝಂಪಾ(1) ವಿಕೆಟ್​ ಒಪ್ಪಿಸಿ ಹೊರ ನಡೆದರು. ಕೊನೆಯಲ್ಲಿ ಆಸ್ಥಾನ್​ ಅಗರ್​(11*) ಮತ್ತು ಜೋಶ್​ ಹಜಾಲ್​ವುಡ್​(1*) ಅಜೇಯರಾಗಿ ಉಳಿದರು.

    ಅಂತಿಮವಾಗಿ ಆಸೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 286 ರನ್​ ಕಲೆಹಾಕಿತು. ಟೀಮ್​ ಇಂಡಿಯಾ ಪರ ಮೊಹಮ್ಮದ್​ ಶಮಿ ಪ್ರಮುಖ 4 ವಿಕೆಟ್​ ಕಬಳಿಸಿ ಆಸೀಸ್​ ಬಳಗವನ್ನು ಕಾಡಿದರು. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್​ ಉರುಳಿಸಿದರೆ, ನವದೀಪ್​ ಸೈನಿ ಮತ್ತು ಕುಲದೀಪ್​ ಯಾದವ್​ ತಲಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts