ಪ್ಯಾರಿಸ್​ ಒಲಿಂಪಿಕ್ಸ್​​ 2024; ಬ್ರೇಕಿಂಗ್​​​​ ವಿಭಾಗದಲ್ಲಿ ಹೈಲೈಟ್ ಆದ ‘ಇಂಡಿಯಾ’ ​​.. ಕಾರಣ ಹೀಗಿದೆ

Untitled-design-99
Published on

ನೀರಜ್ ಚೋಪ್ರಾ, ಮನು ಭಾಕರ್, ಭಾರತೀಯ ಹಾಕಿ ತಂಡ ಮತ್ತು ಇತರ ಆಟಗಾರರ ಅದ್ಭುತ ಪ್ರದರ್ಶನ ಮಾತ್ರವಲ್ಲದೆ ಭಾರತದ ಹೆಸರು ಬ್ರೇಕ್ ಡ್ಯಾನ್ಸ್​​ ವಿಭಾಗದಲ್ಲೂ ಹೈಲೆಟ್​ ಆಗಿದೆ. ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ರೇಕ್ ಡ್ಯಾನ್ಸಿಂಗ್ ಕ್ರೀಡೆಯನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೇರಿಸಲಾಗಿದೆ. ಈ ಒಲಿಂಪಿಕ್ ಕ್ರೀಡೆಯು ಬ್ರೇಕ್ ಡ್ಯಾನ್ಸ್ ಅಕಾ ಬ್ರೇಕಿಂಗ್ ಹೊರತು ಬೇರೇನೂ ಅಲ್ಲ. 2024ರ ಪ್ಯಾರಿಸ್​ ಒಲಿಂಪಿಕ್ಸ್​ನ ಬ್ರೇಕಿಂಗ್​​​​ ವಿಭಾಗದಲ್ಲಿ ಸ್ಪರ್ಧಿಸಲು ಭಾರತವು ಕ್ರೀಡಾಪಟು ಪಾಲ್ಗೊಂಡಿರಬಹುದೆ ಎಂದು ಯೋಚಿಸುತ್ತಿದ್ದೀರಾ. ಆದರೆ ಭಾರತ ಬ್ರೇಕಿಂಗ್​​​​ ಕ್ರೀಡೆಯಲ್ಲಿ ಸ್ಪರ್ಧಿಸಲು ಯಾವುದೇ ಅಥ್ಲೀಟ್​ ಅನ್ನು ಕಳುಹಿಸಿಲ್ಲ.

ಬ್ರೇಕ್‌ಡ್ಯಾನ್ಸಿಂಗ್​​ನಲ್ಲಿ ಭಾರತವು ಮೊದಲ ಪಂದ್ಯವನ್ನು ಗೆದ್ದಿದೆ ಎಂದು ಖೇಲ್ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ನೆದರಲೆಂಡ್​​​ನ ಹೇಗ್​ನ 16 ವರ್ಷದ ಅಥ್ಲೀಟ್​​. ನೀವು ಓದಿದ್ದು ಸರಿ! ನೆದರ್​ಲೆಂಡ್​ನ "ಬಿ-ಗರ್ಲ್ ಇಂಡಿಯಾ" ಎಂದು ಜನಪ್ರಿಯವಾಗಿರುವ ಇಂಡಿಯಾ ಸರ್ಜೋ ಒಲಿಂಪಿಕ್ಸ್ ಗೆದ್ದಿದ್ದಾರೆ ಎಂದು ಖೇಲ್ ಇಂಡಿಯಾ ಮಾಡಿರುವ ಪೋಸ್ಟ್​​ನಲ್ಲಿ ತಿಳಿಸಿದೆ.

16 ವರ್ಷ ವಯಸ್ಸಿನ ಅಥ್ಲೀಟ್ ತನ್ನ ನಿಜವಾದ ಹೆಸರಿನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದರು.ಇಲ್ಲಿ ಬಹುಪಾಲು ಜನರನ್ನು ಬಿ-ಗರ್ಲ್ಸ್ ಅಥವಾ ಬಿ-ಬಾಯ್ಸ್ ಎಂದು ಉಲ್ಲೇಖಿಸಲಾಗುತ್ತದೆ.

ಸ್ಪರ್ಧೆಯ ಬಳಿಕ ಮಾತನಾಡಿರುವ ಇಂಡಿಯಾ ಸರ್ಜೋ, ನಾನೇಕೆ ಬಿ-ಗರ್ಲ್ ಹೆಸರನ್ನು ಬಳಸುವುದಿಲ್ಲ ಎಂದು ಅನೇಕರು ಕೇಳಿದ್ದಾರೆ. ಆದರೆ ನಾನು ಚಿಕ್ಕವಳಿದ್ದಾಗಿನಿಂದ ಯಾವಾಗಲೂ ಹೀಗೆಯೇ. ಯಾರೂ ನನಗೆ ಹುಚ್ಚುತನದ ಹೆಸರನ್ನು ನೀಡಲಿಲ್ಲ. ಬೇರೆ ಯಾವುದೇ ಕಾರಣಕ್ಕೂ ನಾನು ನನ್ನ ಹೆಸರನ್ನು ಬದಲಾಯಿಸುವುದಿಲ್ಲ. ಅದು ಇಂಡಿಯಾ ಸರ್ಜೋ ಎಂದೇ ಉಳಿಯುತ್ತದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net