

England Test Series : ಮುಂಬರುವ ಇಂಗ್ಲೆಂಡ್ ಪ್ರವಾಸದ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಶನಿವಾರ ಹೊಸ ತಂಡ ಪ್ರಕಟ ಮಾಡಿದೆ. ಶುಭಮನ್ ಗಿಲ್ ನಾಯಕನಾಗಿ ಹೊರ ಹೊಮ್ಮಿದ್ದು, ರಿಷಬ್ಪಂತ್ ಉಪನಾಯಕರಾಗಿದ್ದಾರೆ.
ಅತ್ಯಂತ ಕುತೂಹಲ ಮೂಡಿಸಿದ್ದ ಭಾರತದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಶನಿವಾರ (ಮೇ 24) ಸಭೆ ಸೇರಿ ಮುಂದಿನ ಇಂಗ್ಲೆಂಡ್ ಸರಣಿಗೆ ತಂಡ ಅಂತಿಮಗೊಳಿಸಿದೆ. ಇಂಗ್ಲೆಂಡ್ ಸರಣಿಗೆ 18 ಜನರ ತಂಡವನ್ನು ಆಯ್ಕೆ ಮಂಡಳಿ ಪ್ರಕಟಿಸಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತವು ಐದು ಟೆಸ್ಟ್ ಪಂದ್ಯವಾಡಲಿದೆ. ಜೂ.20ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯು ಆಗಸ್ಟ್ 4ರವರೆಗೆ ಸಾಗಲಿದೆ.
ಭಾರತೀಯ ತಂಡ: ಶುಭಮನ್ ಗಿಲ್ (ನಾ), ರಿಷಭ್ ಪಂತ್ (ಉ.ನಾ, ವಿ.ಕೀ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೇಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಆಕಾಶ್ ದೀಪ್, ಅರ್ಶದೀಪ್ ಸಿಂಗ್ ಮತ್ತು ಕುಲದೀಪ್ ಯಾದವ್.(ಏಜೆನ್ಸೀಸ್).