40,134 ಹೊಸ ಕರೊನಾ ಪ್ರಕರಣ; ಅರ್ಧಕ್ಕೂ ಹೆಚ್ಚು ಕೇರಳದಲ್ಲೇ ಪತ್ತೆ!

Corona
Published on

ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 40,134 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ಕೇರಳದಿಂದ 20,728 ಪ್ರಕರಣಗಳು ವರದಿಯಾಗಿದ್ದು, ಈ ರಾಜ್ಯ ಅರ್ಧಕ್ಕಿಂತ ಹೆಚ್ಚು ಸೋಂಕಿನ ಪ್ರಮಾಣ ತೋರಿಸಿದೆ. ಭಾನುವಾರದಂದು ದೇಶಾದ್ಯಂತ ಕರೊನಾದಿಂದಾಗಿ 422 ಜನ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಹಾಲಿ ಸಕ್ರಿಯವಾಗಿರುವ ಪ್ರಕರಣ ಸಂಖ್ಯೆಯು 4,13,718ಕ್ಕೆ ಏರಿದೆ. ದೇಶದಲ್ಲಿ ಈವರೆಗೆ ಒಟ್ಟು 3,16,95,958 ಕರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದರೆ, 4,24,773 ಜನರು ಕರೊನಾಗೆ ಬಲಿಯಾಗಿದ್ದಾರೆ. ಒಟ್ಟು 3,08,57,467 ಸೋಂಕಿತರು ಗುಣಮುಖರಾಗಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net