24ಗಂಟೆಯಲ್ಲಿ 14 ಸಾವಿರಕ್ಕೂ ಹೆಚ್ಚು ಹೊಸ ಕರೊನಾ ಪ್ರಕರಣಗಳು...

covid19 20 June 20
Published on

ನವದೆಹಲಿ: ದೇಶಾದ್ಯಂತ ಅನ್​ಲಾಕ್​-1 ಜಾರಿಯಾಗಿ, ಜನರ ಓಡಾಟ, ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿವೆ. ಹಾಗೇ ಕರೊನಾ ಪ್ರಸರಣವೂ ಹೆಚ್ಚುತಲೇ ಇದೆ.

ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 395,048ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ 14,516 ಹೊಸ ಕೊವಿಡ್​-19 ಪ್ರಕರಣಗಳು ಪತ್ತೆಯಾಗಿದ್ದು, ಇದು ಈವರೆಗಿನ ದಾಖಲೆಯ ಹೆಚ್ಚಳವಾಗಿದೆ ಎಂದು ಇಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಪಾಕ್​ ಡ್ರೋನ್​ನ್ನು ಹೊಡೆದುರುಳಿಸಿದ ಬಿಎಸ್​ಎಫ್​ ಯೋಧರು

ಹಾಗೇ ಕಳೆದ 24 ಗಂಟೆಯಲ್ಲಿ 375 ಮಂದಿ ಕೊವಿಡ್​-19ನಿಂದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 12, 948ಕ್ಕೆ ಏರಿದೆ. ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 1,68,269 ಸಕ್ರಿಯ ಕರೊನಾ ಪ್ರಕರಣಗಳಿದ್ದು, 2, 13, 831 ಮಂದಿ ಗುಣಮುಖರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net