ಪ್ಯಾರಿಸ್: ರೋಚಕ ಗೆಲುವಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಭಿಯಾನ ಆರಂಭಿಸಿರುವ ಭಾರತ ಪುರುಷರ ಹಾಕಿ ತಂಡ ತನ್ನ ಎರಡನೇ ಪಂದ್ಯದಲ್ಲಿ ಸೋಮವಾರ ಅರ್ಜೆಂಟೀನಾ ವಿರುದ್ಧ ಆಡಲಿದೆ. ಹರ್ಮಾನ್‌ಪ್ರೀತ್ ಸಿಂಗ್ ಬಳಗ ಲಯ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.
ನ್ಯೂಜಿಲೆಂಡ್ ಎದುರು ಕಠಿಣ ಪೈಪೋಟಿ ನಡೆಸಿದ ಭಾರತಕ್ಕೆ ದಕ್ಷಿಣ ಅಮೆರಿಕದ ಅರ್ಜೆಂಟೀನಾ ವಿರುದ್ಧವೂ ಸತ್ವಪರೀಕ್ಷೆ ಎದುರಾಗಲಿದೆ. ಅರ್ಜೆಂಟೀನಾ ಎದುರು ಗೆಲುವು ದಾಖಲಿಸಿದರೆ ಹರ್ಮಾನ್‌ಪ್ರೀತ್ ಪಡೆಯ ನಾಕೌಟ್ ಪ್ರವೇಶ ಬಹುತೇಕ ಖಾತ್ರಿ ಎನಿಸಲಿದೆ.
‘ಗ್ರೂಪ್ ಆ್ ಡೆತ್’ ಎಂದೇ ಕರಯಲ್ಪಟ್ಟಿರುವ ಎ ಗುಂಪಿನಲ್ಲಿ ಭಾರತ ಪ್ರತಿ ಪಂದ್ಯದಲ್ಲೂ ಭಾರತ ನೈಜ ಸವಾಲು ಎದುರಿಸಲಿದೆ. ಬೆಲ್ಜಿಯಂ, ಆಸ್ಟ್ರೇಲಿಯಾ ಗುಂಪಿನ ಇತರ ಪ್ರಬಲ ಎದುರಾಳಿಗಳು.
ತನ್ನ ಕೊನೇ ಅಂತಾರಾಷ್ಟ್ರೀಯ ಕೂಟದ ಆಡುತ್ತಿರುವ ಗೋಲುಕೀಪರ್ ಪಿಆರ್ ಶ್ರೀಜೇಶ್‌ಗೆ ಸ್ಮರಣೀಯ ವಿದಾಯ ಹೇಳಲು ಸಜ್ಜಾಗಿರುವ ಭಾರತ ‘ಡು ಇಟ್ ಾರ್ ಶ್ರೀಜೇಶ್’ ನಿಟ್ಟಿನಲ್ಲಿ ಕಣಕ್ಕಿಳಿದಿದೆ. ವಿಶ್ವ ರ‌್ಯಾಂಕಿಂಗ್‌ನಲ್ಲಿ ಉಭಯ ತಂಡಗಳ ನಡುವೆ ಭಾರಿ ಅಂತರವಿಲ್ಲ, ಅರ್ಜೆಂಟೀನಾ 6ನೇ, ಭಾರತ 7ನೇ ಸ್ಥಾನದಲ್ಲಿದೆ. ಆದರೆ ಅರ್ಜೆಂಟೀನಾ ತಂಡದ ಆಕ್ರಮಣಕಾರಿ ಆಟ ಭಾರತ ರಕ್ಷಣಾತ್ಮಕ ವಿಭಾಗಕ್ಕೆ ಸವಾಲು ಎನಿಸಿದೆ.
ಪಂದ್ಯ ಆರಂಭ: ಸಂಜೆ 4.15
ನೇರ ಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18