ನವದೆಹಲಿ: ಎರಡು ಟೆಸ್ಟ್‌ಗಳ ಸರಣಿಯನ್ನು ಆಡಲು ಬಾಂಗ್ಲಾದೇಶ ನೆರೆಯ ಪಾಕಿಸ್ತಾನಕ್ಕೆ ತೆರಳಿದೆ. ಮೊದಲ ಟೆಸ್ಟ್ ಪಂದ್ಯದಲ್ಲೇ ಬಾಂಗ್ಲಾ ವಿರುದ್ಧ ಪಾಕ್ 10 ವಿಕೆಟ್ಗಳ ಅಂತರದಿಂದ ಹೀನಾಯವಾಗಿ ಸೋಲುಂಡಿದೆ. ಉಭಯ ತಂಡಗಳ ನಡುವೆ ಈವರೆಗೂ ನಡೆದ 13 ಮ್ಯಾಚ್ಗಳ ಪೈಕಿ 12 ಬಾರಿ ಬಾಂಗ್ಲಾ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬಾಂಗ್ಲಾ ಬೆವರಿಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸಿದೆ.
ಈ ಹೀನಾಯ ಸೋಲಿನ ಬೆನ್ನಲ್ಲೇ ತಂಡದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಪಾಕ್ನ ಮಾಜಿ ಕ್ರಿಕೆಟಿಗರು ಸೋಲಿಗೆ ಕಾರಣಗಳನ್ನು ವಿವರಿಸುವ ಮೂಲಕ ಪಾಕ್ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಈ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ವಿಭಿನ್ನ ಹೇಳಿಕೆ ನೀಡಿದ್ದಾರೆ. ಅದೇನೆಂದರೆ, ಬಾಂಗ್ಲಾ ವಿರುದ್ಧ ಪಾಕ್ ಸೋಲಿಗೆ ಭಾರತವೂ ಕೂಡ ಒಂದು ಕಾರಣ ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬಹಿರಂಗಪಡಿಸಿದ್ದಾರೆ.
ಮೊದಲನೆಯದಾಗಿ ತಂಡದ ಆಯ್ಕೆಯಲ್ಲೇ ತಪ್ಪಾಗಿದೆ. ನೀವು ಸ್ಪಿನ್ನರ್ ಇಲ್ಲದೆ ಆಡಿದ್ದೀರಿ. ಎರಡನೆಯದಾಗಿ ನಮ್ಮ ವೇಗದ ಬೌಲರ್‌ಗಳ ಖ್ಯಾತಿಯು ಕೂಡ ಕಡಿಮೆಯಾಗಿದೆ. ಬಾಂಗ್ಲಾ ವಿರುದ್ಧದ ಸೋಲು ಒಂದು ರೀತಿಯ ಆತ್ಮವಿಶ್ವಾಸದ ಬಿಕ್ಕಟ್ಟಾಗಿದೆ. ಇದು ಏಷ್ಯಾಕಪ್‌ನಲ್ಲಿ ಭಾರತದಿಂದಲೇ ಪ್ರಾರಂಭವಾಯಿತು. ಏಷ್ಯಾಕಪ್ ಸಂದರ್ಭದಲ್ಲಿ ನಮ್ಮ ವೇಗಿಗಳನ್ನು ಟೀಮ್ ಇಂಡಿಯಾ ಸುಲಭವಾಗಿ ಎದುರಿಸಿತು ಮತ್ತು ರನ್ಗಳ ಮಳೆಯನ್ನೇ ಹರಿಸಿತು. ನಮ್ಮ ವೇಗಿಗಳ ಸೀಮಿಂಗ್ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿದರು. ಆ ಬಳಿಕ ಈ ಲೈನ್-ಅಪ್ ಬೌಲಿಂಗ್ ಎದುರಿಸುವ ಏಕೈಕ ಮಾರ್ಗವೆಂದರೆ ಸ್ಫೋಟಕ ಆಟವೆಂಬ ರಹಸ್ಯವು ಹೊರಬಿತ್ತು ಎಂದು ರಮೀಜ್ ರಾಜಾ ಹೇಳಿದ್ದಾರೆ.
ಭಾರತ ಬ್ಯಾಟ್ಸ್ಮನ್ಗಳು ಪಾಕ್ ಬೌಲರ್‌ಗಳ ಮೇಲೆ ದಾಳಿ ಮಾಡಿದಾಗಿನಿಂದ ನಮ್ಮ ಬೌಲರ್ಗಳು ಮಂಕಾಗಿದ್ದಾರೆ. ಅವರ ಬೌಲಿಂಗ್ನಲ್ಲಿ ಮೊದಲಿನ ಲಯ ಇಲ್ಲ ಮತ್ತು ವೇಗವೂ ಇಲ್ಲ. ಆದರೆ, ಇದಕ್ಕೆ ವಿರುದ್ಧವಾಗಿ ಬಾಂಗ್ಲಾ ಬೌಲರ್‌ಗಳ ಬೌಲಿಂಗ್ ನಮ್ಮವರಿಗಿಂತ ಹೆಚ್ಚು ಸೀಮಿಂಗ್ ಇತ್ತು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಮೀಜ್ ರಜಾ, ಪಾಕ್ ನಾಯಕ ಶಾನ್ ಮಸೂದ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಗಳನ್ನು ಸರಿಯಾಗಿ ನಿರ್ಣಯಿಸುವಲ್ಲಿ ಮಸೂದ್ ದಯನೀಯವಾಗಿ ವಿಫಲರಾಗಿದ್ದಾರೆ. ಸರಿಯಾದ ಸ್ಪಿನ್ನರ್‌ಗಳಿಲ್ಲದೆ ರಿಂಗ್‌ಗೆ ಇಳಿದು 448 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ನಿರ್ಧಾರಗಳು ನಾಯಕನಾಗಿ ಶಾನ್ ಮಸೂದ್ ಮೇಲೆ ಕೆಟ್ಟ ಪರಿಣಾಮ ಬೀರಿವೆ ಎಂದು ಹೇಳಿದರು.
ಮಸೂದ್ ನಾಯಕತ್ವದ ಹೊರತಾಗಿ ಬ್ಯಾಟಿಂಗ್ ಕೌಶಲ್ಯದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಈಗ ಉಳಿದಿರುವ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಬೇಕು ಮತ್ತು ಯಾವುದೇ ಸಂದರ್ಭದಲ್ಲೂ ತವರಿನಲ್ಲಿ ಸರಣಿಯನ್ನು ಕಳೆದುಕೊಳ್ಳಬಾರದು ಎಂದು ಅವರು ಪಾಕಿಸ್ತಾನ ತಂಡಕ್ಕೆ ರಮೀಜ್ ರಾಜಾ ಸಲಹೆ ನೀಡಿದರು. (ಏಜೆನ್ಸೀಸ್)
Ramiz Raja said – "When India bashed Pakistan's Pacers in Asia Cup 2023 in seaming conditions and pitches, from then the reputation on which we rely for our fast bowlers is finished. Then the secret was out to the World". (On his YT). pic.twitter.com/RjWacZrLPV
— Tanuj Singh (@ImTanujSingh) August 26, 2024
ಸರ್ಕಾರ ಧ್ವಂಸ ಮಾಡಿದ ನಟ ನಾಗಾರ್ಜುನ್ ಎನ್ ಕನ್ವೆನ್ಷನ್ ಕಟ್ಟಡದ 1 ದಿನದ ಬಾಡಿಗೆ ಇಷ್ಟೊಂದಿತ್ತಾ?
ರಾತ್ರಿ ಹೊತ್ತು ಬಾಳೆಹಣ್ಣು ತಿಂದರೆ ದಪ್ಪ ಆಗ್ತಾರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…