ಭಾರತ ಅತಿಮುಖ್ಯ ರಾಷ್ಟ್ರ; ರಷ್ಯಾದ ವಿದೇಶಾಂಗ ಸಚಿವ ಹೀಗಂದಿದ್ಯಾಕೆ?

Russia
Published on

ನವದೆಹಲಿ: ರಷ್ಯಾ-ಯೂಕ್ರೇನ್​ ಸಮರ ಸಂಘರ್ಷದ ಸಂದರ್ಭದಲ್ಲೇ ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊ ಭಾರತಕ್ಕೆ ಭೇಟಿ ನೀಡಿ, ಭಾರತದ ವಿದೇಶಾಂಗ ಸಚಿವ ಜೈಶಂಕರ್​ ಅವರ ಜತೆ ಮಾತುಕತೆ ನಡೆಸಿದ್ದು, ಮಹತ್ವದ ವಿಷಯಗಳು ಚರ್ಚೆ ಆಗಿವೆ.

ರಷ್ಯಾ-ಯೂಕ್ರೇನ್​ ನಡುವಿನ ಸಂಘರ್ಷದ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ಪರ-ವಿರೋಧ ಮಾತನಾಡದೆ ಮೌನವಹಿಸಿದ್ದ ಭಾರತದ ನಡೆ ಇದೀಗ ಫಲ ಕೊಟ್ಟಿರುವಂತೆ ಕಾಣುತ್ತಿದೆ. ರಷ್ಯಾ ವಿದೇಶಾಂಗ ಸಚಿವ ನೀಡಿರುವ ಭರವಸೆಯೇ ಅಂಥದ್ದೊಂದು ಬೆಳವಣಿಗೆಯನ್ನು ವ್ಯಕ್ತಪಡಿಸಿದೆ.

ಭಾರತದ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ, ರಷ್ಯಾದಿಂದ ಭಾರತ ಏನೇ ಖರೀದಿಸಲು ಮುಂದಾದರೂ ನಾವು ಪೂರೈಸುತ್ತೇವೆ, ಭಾರತಕ್ಕೆ ಸಕಲ ಸಹಕಾರ ಇರಲಿದೆ ಎಂಬುದಾಗಿ ಹೇಳಿದ್ದಾರೆ.

ಇನ್ನು ರಷ್ಯಾ-ಯೂಕ್ರೇನ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವ ಕುರಿತು ಪ್ರತಿಕ್ರಿಯಿಸಿರುವ ಅವರು, ಭಾರತ ಅತಿಮುಖ್ಯ ದೇಶ. ಸದ್ಯದ ಸಮಸ್ಯೆಗೆ ಪರಿಹಾರ ಸೂಚಿಸಲು ಹಾಗೂ ಅಂತಾರಾಷ್ಟ್ರಿಯ ಸಮಸ್ಯೆಗೆ ತರ್ಕಬದ್ಧ ಪರಿಹಾರ ಸೂಚಿಸುವ ಇರಾದೆ ಹೊಂದಿದ್ದರೆ ಅಂಥ ಪ್ರಕ್ರಿಯೆಗೆ ಬೆಂಬಲಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net