

Ravichandran Ashwin: ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ಬಳಸಿದ ರಣತಂತ್ರಗಳ ಬಗ್ಗೆ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಶ್ ಕಿ ಬಾತ್ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅಶ್ವಿನ್, ಭಾರತವು ಸ್ಪಿನ್ನರ್‌ಗಳನ್ನು ಬಳಸದಿರುವುದನ್ನು ನೋಡಿದರೆ, ಈ ಸರಣಿಯಲ್ಲಿ ಅರಿವಿನ ಕೊರತೆ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ನಮ್ಮ ರಣತಂತ್ರದ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಈ ಸರಣಿಯಲ್ಲಿ ಇಂಗ್ಲೆಂಡ್ ಮುನ್ನೆಡೆ ಸಾಧಿಸಲು ಮತ್ತು ಭಾರತ ಹಿಂದೆ ಇರಲು ಸ್ಪಿನ್ನರ್‌ಗಳನ್ನು ಬಳಸದಿರುವುದು ಮುಖ್ಯ ಕಾರಣ ಎಂದು ತಿಳಿಸಿದ್ದಾರೆ.
ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ 4ನೇ ವಿಕೆಟ್ಗೆ 195 ರನ್ ಜೋತೆಯಾಟದ ಸಂದರ್ಭದಲ್ಲಿ ಭಾರತ ರನ್ ವೇಗವನ್ನು ತಡೆಯಲು ವಾಷಿಂಗ್ಟನ್ ಸುಂದರ್ ಅವರನ್ನು ಮೊದಲೇ ದಾಳಿಗೆ ಕರೆತರಬಹುದಿತ್ತು ಎಂದು ಅಶ್ವಿನ್ ಆಭಿಪ್ರಾಯಪಟ್ಟಿದ್ದಾರೆ.
ಹ್ಯಾರಿ ಬ್ರೂಕ್ 20 ರನ್‌ಗಳ ನಂತರ ಅಕ್ರಮಣಕಾರಿಯಾಗಿ ಆಡಲು ಪ್ರಾರಂಭಿಸಿದಾಗ, ರನ್ ಹರಿವನ್ನು ತಡೆಯಲು ನೀವು ಸ್ಪಿನ್ನರ್‌ಗಳನ್ನು ಕರೆತರಬಹುದಿತ್ತು. ಇನ್ನೊಂದು ತುದಿಯಿಂದ, ವೇಗಿಗಳನ್ನು ಬೌಲಿಂಗ್ಗೆ ಇರಿಸಬಹುದಿತ್ತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ವಾಷಿಂಗ್ಟನ್ ಸುಂದರ್ ಅವರನ್ನು ಮೊದಲೇ ದಾಳಿಗೆ ಕರೆತರಬಹುದಿತ್ತು" ಎಂದು ಈ ಸಂದರ್ಭದಲ್ಲಿ ಅಶ್ವಿನ್ ಹೇಳಿದರು.
ಭಾರತ ತಂಡ ನಾಲ್ಕನೇ ಮತ್ತು ಅಂತಿಮ ಇನ್ನಿಂಗ್ಸ್‌ನಲ್ಲಿ ಇದುವರೆಗೆ ಬೌಲಿಂಗ್ ಮಾಡಿರುವ 76.2 ಓವರ್‌ಗಳಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಕೇವಲ 8 ಓವರ್ ಬೌಲಿಂಗ್ ಮಾಡಿದ್ದಾರೆ, ಇಬ್ಬರೂ ಸ್ಪಿನ್ನರ್‌ಗಳು ತಲಾ ನಾಲ್ಕು ಓವರ್‌ಗಳನ್ನು ಎಸೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಒಂದೇ ಒಂದು ಓವರ್ ಎಸೆದಿಲ್ಲ, ಆದರೆ ಜಡೇಜಾ ಎರಡು ಓವರ್ ಎಸೆದಿದ್ದಾರೆ.(ಏಜೆನ್ಸೀಸ್)