ಅಮೆರಿಕಕ್ಕೆ 18 ಲಕ್ಷ ಮಾಸ್ಕ್‌ಗಳನ್ನು ದಾನ ಮಾಡಿದ ಭಾರತ!

Masks
Published on

ವಾಷಿಂಗ್ಟನ್: ಅಮೆರಿಕದ ಫಿಲಡೆಲ್ಫಿಯಾಕ್ಕೆ ಭಾರತ 18 ಲಕ್ಷ ಮಾಸ್ಕ್‌ಗಳನ್ನು ದಾನ ಮಾಡಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಆರನೇ ನಗರವಾಗಿರುವ ಫಿಲಡೆಲ್ಫಿಯಾದಲ್ಲಿ ಮುಖ್ಯ ಭೂಮಿಕೆ ಕೆಲಸಗಾರರು ಧರಿಸಲು ಮಾಸ್ಕ್ ನೀಡುವಂತೆ ಅಲ್ಲಿನ ಮೇಯರ್ ಭಾರತಕ್ಕೆ ಮನವಿ ಮಾಡಿದ್ದರು.

ಇದನ್ನು ಪರಿಗಣಿಸಿರುವ ಭಾರತ 18 ಲಕ್ಷ ಮಾಸ್ಕ್ ನೀಡಿದೆ. ಉಭಯ ದೇಶಗಳ ನಡುವಿನ ಸೌಹಾರ್ದತೆಗೆ ಇದೊಂದು ಉದಾಹರಣೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net