ನ್ಯೂಯಾರ್ಕ್‌ನಲ್ಲಿ 'ಇಂಡಿಯಾ ಡೇ ಪರೇಡ್‌'; ರಶ್ಮಿಕಾ ಕೈ ಹಿಡಿದು ನಡೆದ ವಿಜಯ್ ದೇವರಕೊಂಡ| Entertainment

rashmika
Published on

Entertainment; ನ್ಯೂಯಾರ್ಕ್ ನಗರದಲ್ಲಿ ಭಾನುವಾರ ನಡೆದ 43ನೇ ಇಂಡಿಯಾ ಡೇ ಪರೇಡ್‌ಗೆ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದು, ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದ್ದಾರೆ. ಭಾರತದ ಹೊರಗೆ ನಡೆದ ಅತಿದೊಡ್ಡ ಸ್ವಾತಂತ್ರ್ಯ ದಿನಾಚರಣೆ ಎಂದು ನಂಬಲಾದ ಪೆರೇಡ್‌ನಲ್ಲಿ ಇಬ್ಬರೂ ತಾರೆಗಳನ್ನು ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಗೌರವಿಸಲಾಯಿತು.

ಇಬ್ಬರೂ ಕೂಡ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಬೇರೆ ಇದೆ. ಈ ಸಂದರ್ಭದಲ್ಲಿ ಇಬ್ಬರು ತಾರೆಯರು ಕೈ ಹಿಡಿದುಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದೆ.

(ಏಜೆನ್ಸೀಸ್)

ಅಲ್ಲಿರುವ ಭಾರತೀಯರು ಇವರನ್ನು ಅತಿಥಿಯಾಗಿ ಕರೆಸಿದ್ದರಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಇವರು, ಮ್ಯಾನ್​ಹಾಟನ್ ರಸ್ತೆಗಳಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ಕೈ ಕೈ ಹಿಡಿದುಕೊಂಡು ಹೆಜ್ಜೆ ಹಾಕಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಜೋಡಿಯನ್ನು ಅನೇಕರು ಕೊಂಡಾಡಿದ್ದು, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಈಸ್ ಬ್ಯಾಕ್ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net