

ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಕರೊನಾ ಪಾಸಿಟಿವ್ ಇದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಾವಳಿ ಜುಲೈ 1 ರಿಂದ ಆರಂಭವಾಗಲಿದ್ದು, ಸದ್ಯ ನಾಯಕ ಕರೊನಾ ಚಿಕಿತ್ಸೆ ಪಡೆಯುತ್ತಿರುವುದರಿಂದ ತಂಡವನ್ನು ಜಸಪ್ರೀತ್ ಬುಮ್ರಾ ಅಥವಾ ವಿಕೇಟ್ ಕೀಪರ್ ರಿಷಬ್ ಪಂಥ್ ಪಂದ್ಯವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಸದ್ಯ ಹೋಟೆಲ್ವೊಂದರಲ್ಲಿ ರೋಹಿತ್ ಶರ್ಮಾ ಅವರಿಗೆ ಬಿಸಿಸಿಐ ವೈದ್ಯರ ತಂಡದಿಂದಲೇ ವೀಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾನುವಾರ ಬಿಸಿಸಿಐ ಟ್ವೀಟ್ ಮೂಲಕ ತಿಳಿಸಿದೆ.
35 ವರ್ಷದ ಶುಭಮನ್ ಗಿಲ್ ಅವರು ಇನ್ನಿಂಗ್ಸ್ ತೆರೆಯುವ ನಿರೀಕ್ಷೆ ಇದ್ದು, ಆದರೆ ಟೆಸ್ಟ್ ಪಂದ್ಯದಲ್ಲಿ ಅವರ ಭಾಗವಹಿಸುವಿಕೆ ಈಗ ಕರೊನಾ ಪರೀಕ್ಷೆ ಮೇಲೆ ನಿಂತಿದೆ. ಇನ್ನು ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಮೊದಲೇ ಕರೊನಾ ಪಾಸಿಟಿವ್ ಬಂದಿದ್ದರಿಂದ ತಂಡದಿಂದ ಪ್ರವಾಸವನ್ನೇ ಕೈ ಬಿಟ್ಟಿದ್ದರು. (ಏಜೆನ್ಸೀಸ್)